ವೋಟ್ ಬ್ಯಾಂಕ್'ಗಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ದಲಿತ ನಾಯಕನ ಆಯ್ಕೆ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ದಲಿತ ನಾಯಕರಾಗಿರುವ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ಶಿವಸೇನೆ ಸೋಮವಾರ ಹೇಳಿದೆ...
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಮುಂಬೈ: ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಬಿಜೆಪಿ ದಲಿತ ನಾಯಕರಾಗಿರುವ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ಶಿವಸೇನೆ ಸೋಮವಾರ ಹೇಳಿದೆ. 
ಸಂಘಟನೆಯ 51ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ರಾಷ್ಟ್ರಪತಿ ಚುನಾವಣೆಯಲ್ಲಿ ಶಿವಸೇನೆಗೆ ಯಾವುದೇ ಆಸಕ್ತಿಯಿಲ್ಲ. ಆದರೆ, ದಲಿತ ಸಮುದಾಯವೆಂಬ ಕಾರಣಕ್ಕೆ ರಾಷ್ಟ್ರಪತಿ ಆಭ್ಯರ್ಥಿಯಾಗಿ ರಾಮನಾಥ ಅವರನ್ನು ಆಯ್ಕೆ ಮಾಡಿರುವುದೇ ಆದರೆ, ವೋಟ್ ಬ್ಯಾಂಕ್ ಗಾಗಿ ಮಾಡಿದೆ ಎಂದು ಹೇಳಬಹುದು ಎಂದು ಹೇಳಿದ್ದಾರೆ. 
ಇಡೀ ದೇಶದ ಹಿತಾಸಕ್ತಿಗೆ ಅನುಗುಣವಾಗಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಶಿವಸೇನ ಈ ರಾಷ್ಟ್ರಪತಿ ಅಭ್ಯರ್ಥಿಗೆ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸೂಚಿಸಿತ್ತು. ಹಿಂದೂ ರಾಷ್ಟ್ರವಾಗಿರುವ ಕಾರಣಕ್ಕೆ ಭಾಗವತ್ ಅವರ ಹೆಸರನ್ನು ನೀಡಲಾಗಿತ್ತು. ವಿಜ್ಞಾನಿ ಡಾ.ಎಂ.ಎಸ್ ಸ್ವಾಮಿನಾಥನ್ ಅವರೂ ಕೂಡ ಉತ್ತಮವಾದ ಅಭ್ಯರ್ಥಿಯಾಗಿದ್ದರು. ಹಸಿರು ಕ್ರಾಂತಿಗಾಗಿ ಅವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆಂದು ತಿಳಿಸಿದ್ದಾರೆ. 
ಕೋವಿಂದ್ ಆಯ್ಕೆ ಕುರಿತಂತೆ ಸಹೋದ್ಯೋಗಿಗಳೊಂದಿಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದೇನೆ. ನಂತರವಷ್ಟೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 
ಇದೇ ವೇಳೆ ಮಹಾರಾಷ್ಟ್ರ ಮಧ್ಯಂತರ ಚುನಾವಣೆ ಕುರಿತಂತೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಪ್ರತೀ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆಂದು ಯಾವುದೇ ರಾಜಕೀಯ ಪಕ್ಷಗಳೂ ಚಿಂತಿಸುವುದಿಲ್ಲ. ರಾಜ್ಯದಲ್ಲಿನ ಪರಿಸ್ಥಿತಿಗಳು ಶೀಘ್ರಗತಿಯಲ್ಲಿ ಬದಲಾಗುತ್ತಿವೆ. ಸಾಲಮನ್ನಾದಿಂದಾಗಿ ರೈತರು ಸಾಕಷ್ಟು ಅಕ್ರೋಶಭರಿತರಾಗಿದ್ದಾರೆ. ಮಧ್ಯಂತರ ಚುನಾವಣೆಗೆ ಸೇನೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com