ಯೋಗದಿಂದ ಹಾರ್ಮೋನ್ ಅಸಮತೋಲನ ತಡೆಗಟ್ಟಲು ಸಾಧ್ಯ: ಹಿರಿಯ ಯೋಗ ಗುರು ನಾನಮ್ಮಾಳ್

ಯೋಗಾಭ್ಯಾಸದಿಂದ ಹಾರ್ಮೋನ್ ಅಸಮತೋಲನ ತಡೆಗಟ್ಟಲು ಸಾಧ್ಯ ಎಂದು ಭಾರತದ ಅತಿ ಹಿರಿಯ ಯೋಗ ಗುರು ಅಮ್ಮಾ ನಾನಮ್ಮಾಳ್ ಅಭಿಪ್ರಾಯಪಟ್ಟಿದ್ದಾರೆ.
ಯೋಗ ಗುರು ನಾನಮ್ಮಾಳ್
ಯೋಗ ಗುರು ನಾನಮ್ಮಾಳ್
ಬೆಂಗಳೂರು: ಯೋಗಾಭ್ಯಾಸದಿಂದ ಹಾರ್ಮೋನ್ ಅಸಮತೋಲನ ತಡೆಗಟ್ಟಲು ಸಾಧ್ಯ ಎಂದು ಭಾರತದ ಅತಿ ಹಿರಿಯ ಯೋಗ ಗುರು ಅಮ್ಮಾ ನಾನಮ್ಮಾಳ್ ಅಭಿಪ್ರಾಯಪಟ್ಟಿದ್ದಾರೆ. 
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸಂದೇಶ ನೀಡಿರುವ ನಾನಮ್ಮಾಳ್, ಸಂತಾನ ಹೀನತೆ ಸಮಸ್ಯೆಗಳು ಹಾಗೂ ಹಾರ್ಮೋನ್ ಅಸಮತೋಲನಗಳನ್ನು ಹೋಗಲಾಡಿಸುವುದಕ್ಕೆ ಯೋಗ ಅತ್ಯಂತ ಹೆಚ್ಚು ಸಹಕಾರಿ ಎಂದು ನಾನಮ್ಮಾಳ್ ಹೇಳಿದ್ದಾರೆ. 
97 ವರ್ಷದ ಹಿರಿಯರಾದ ನಾನಮ್ಮಾಳ್ ಕೊಯಂಬತ್ತೂರಿನ ನಿವಾಸಿಯಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ಥೈರಾಯ್ಡ್ ಪ್ರಮಾಣವನ್ನು ಕಡಿಮೆ ಮಾಡಬಹುದು, ಈ ಸಮಸ್ಯೆಗಳಿಗೆ ಹಲವು ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಯೋಗ ಮಾಡಿದರೆ ಶಸ್ತ್ರಚಿಕಿತ್ಸೆ ಮೊರೆ ಹೋಗುವ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ತಮ್ಮ ದಿನಚರಿಯ ಬಗ್ಗೆಯೂ ಮಾತನಾಡಿರುವ ನಾನಮ್ಮಾಳ್, "ಪ್ರತಿದಿನ ಬೆಳಿಗ್ಗೆ 6 ಕ್ಕೆ ಏಳುತ್ತೇನೆ, ಹಲ್ಲುಜ್ಜುವುದಕ್ಕೆ ಟೂತ್ ಪೇಸ್ಟ್ ಬಳಾಸುವುದಿಲ್ಲ. ಬದಲಾಗಿ ಬೇವಿನ ಕಡ್ಡಿ ಬಳಸುತ್ತೇನೆ. ನಂತರ ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತೇನೆ, ಹಾಗೆಯೇ ನಾನೂ ಯೋಗ ಮಾಡುತ್ತೇನೆ" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com