ರಾಜಸ್ಥಾನ: ರೇಷನ್ ಬೇಕೇ.. ಹಾಗಾದರೆ "ನಾನು ಬಡವ" ಎಂದು ಗೋಡೆಮೇಲೆ ಬರೆಸಿ!

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಫಲಾನುಭವಿಗಳು ತಮ್ಮ ಮನೆಯ ಗೋಡೆಯ ಮೇಲೆ "ನಾನು ಬಡವ, ಆಹಾರ ಭದ್ರತಾ ಕಾಯ್ದೆಯಡಿ ನಾನು ಪಡಿತರ ಪಡೆಯುತ್ತೇನೆ ಎಂಬ ಬರಹಗಳನ್ನು ಬರೆದುಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಗೋಡೆಗಳ ಮೇಲೆ ವಿವಾದಾತ್ಮಕ ಬರಹ
ಗೋಡೆಗಳ ಮೇಲೆ ವಿವಾದಾತ್ಮಕ ಬರಹ

ಜೈಪುರ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಫಲಾನುಭವಿಗಳು ತಮ್ಮ ಮನೆಯ ಗೋಡೆಯ ಮೇಲೆ "ನಾನು ಬಡವ, ಆಹಾರ ಭದ್ರತಾ ಕಾಯ್ದೆಯಡಿ ನಾನು ಪಡಿತರ ಪಡೆಯುತ್ತೇನೆ ಎಂಬ ಬರಹಗಳನ್ನು  ಬರೆದುಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಇಂತಹ ವಿಲಕ್ಷಣ ಕೃತ್ಯ ಬೆಳಕಿಗೆ ಬಂದಿದ್ದು, ಸರ್ಕಾರಿ ಅಧಿಕಾರಿಗಳ ಸೂಚನೇ ಮೇರೆಗೆ ಇಂತಹ ಬರಹಗಳನ್ನು ಬರೆಸಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜಸ್ಥಾನದ ದೌಸಾ ಜಿಲ್ಲೆಯ  ಸಿಕ್ರಾಯ್‌ ಹಾಗೂ ಬಂಡಿಕುಯಿ ತಾಲೂಕಿನ 50 ಸಾವಿರ ಮನೆಗಳ ಗೋಡೆಗಳ ಮೇಲೆ ಈ ರೀತಿ ಬರೆಸಲಾಗಿದ್ದು, ಪಡಿತರ ಪಡೆಯುವ ಬಡವರ ಮನೆಯ ಗೋಡೆ ಮೇಲೆ ‘ನಾನು ಬಡವ. ಆಹಾರ ಭದ್ರತಾ ಕಾಯ್ದೆಯಡಿ ನಾನು  ಪಡಿತರ ಪಡೆಯುತ್ತೇನೆ' ಎಂದು ರಾಜಸ್ಥಾನ ಸರ್ಕಾರ ಬಣ್ಣದಲ್ಲಿ ಬರೆಸಲಾಗಿದೆ.

ಒಂದು ವೇಳೆ ತಮ್ಮ ಮನೆ ಮೇಲೆ ಈ ಸಾಲುಗಳನ್ನು ಬರೆಸಿಕೊಳ್ಳಲು ನಿರಾಕರಿಸುವ ಜನರಿಗೆ ಪಡಿತರ ನಿರಾಕರಿಸಲಾಗುತ್ತಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ. ಬಿಪಿಎಲ್‌ ಹಾಗೂ ಆಹಾರ ಭದ್ರತಾ ಕಾಯ್ದೆಯಡಿ  ಪಡಿತರ ಪಡೆಯುತ್ತಿರುವವರನ್ನು ಗುರುತಿಸಲು ಈ ರೀತಿ ಮನೆಗಳ ಮೇಲೆ ಬರೆಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಇದೆ ಎಂದು ದೌಸಾ ಜಿಲ್ಲಾ ಪಂಚಾಯಿತಿ ಸಿಇಒ ಸುರೇಂದ್ರ ಸಿಂಗ್‌ ತಿಳಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜಸ್ಥಾನ ಸರ್ಕಾರ 10 ಕೆ.ಜಿ. ಗೋಧಿ ನೀಡಲಾಗುತ್ತದೆ.

ಬರಹಗಳ ಮೂಲಕ ಬಡವರಿಗೆ ಅವಮಾನ; ಸ್ಥಳೀಯರ ಆಕ್ರೋಶ
ಇನ್ನು ನಾನು ಬಡವ..' ಎಂದು ಮನೆ ಮೇಲೆ ಬರೆಸಿಕೊಂಡರೂ ತಮಗೆ ಪಡಿತರ ದೊರೆಯುತ್ತಿಲ್ಲ ಎಂದು ಕೆಲವು ಗ್ರಾಮಸ್ಥರು ದೂರಿದ್ದು, ಅಲ್ಲದೆ ಬಡವ ಎಂದು ಬರೆಸಿ ಕೊಂಡರೆ 750 ರು. ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು.  ಹೀಗಾಗಿ ಬರೆಸಿಕೊಳ್ಳಲಾಯಿತು ಎಂದು ಕೆಲವರು ತಿಳಿಸಿದ್ದಾರೆ. ಅಂತೆಯೇ ಬಡವ ಎಂದು ಗೋಡೆಯ ಮೇಲೆ ಬರೆಯಬೇಡಿ ಎಂದು ಹೇಳಿದರೂ, ಸರ್ಕಾರಿ ಸಿಬ್ಬಂದಿ ಬರೆದು ಹೋಗಿದ್ದಾರೆ. ಇದರಿಂದ ತಮಗೆ ಅವಮಾನವಾಗುತ್ತಿದೆ.  ಸರ್ಕಾರ  ಬಡವರನ್ನು ತಮಾಷೆ ಮಾಡುತ್ತಿದೆ ಎಂದು ಗ್ರಾಮ ಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com