ಕಾರ್ಟೊಸ್ಯಾಟ್ -2 ಸರಣಿ ಉಪಗ್ರಹ, 30 ಇತರೆ ಉಪಗ್ರಹಗಳ ಯಶಸ್ವಿ ಉಡಾವಣೆ

ಪಿಎಸ್ಎಲ್ ವಿ-38 ರಾಕೆಟ್ ಕಾರ್ಟೊಸಾಟ್ -2 ಸರಣಿ ಉಪಗ್ರಹ, 30 ಸಹ ಪ್ರಯಾಣಿಕ ಉಪಗ್ರಹಗಳನ್ನು ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ...
ಪಿಎಸ್ಎಲ್ ವಿ-ಸಿ38 ರಾಕೆಟ್ ಗಳನ್ನು ಹೊತ್ತೊಯ್ದ ಕಾರ್ಟೊಸಾಟ್ -2 ಸರಣಿ ಉಪಗ್ರಹದ ವಿಶಾಲ ನೋಟ
ಪಿಎಸ್ಎಲ್ ವಿ-ಸಿ38 ರಾಕೆಟ್ ಗಳನ್ನು ಹೊತ್ತೊಯ್ದ ಕಾರ್ಟೊಸಾಟ್ -2 ಸರಣಿ ಉಪಗ್ರಹದ ವಿಶಾಲ ನೋಟ
Updated on: 
ಶ್ರೀಹರಿಕೋಟಾ: ಪಿಎಸ್ಎಲ್ ವಿ-ಸಿ38 ರಾಕೆಟ್  ಕಾರ್ಟೊಸ್ಯಾಟ್ -2 ಸರಣಿ ಉಪಗ್ರಹ, 30 ಸಹ ಪ್ರಯಾಣಿಕ ಉಪಗ್ರಹಗಳನ್ನು ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ರಕ್ಷಣಾ ಕಾರ್ಯತಂತ್ರ ಹಾಗೂ ಕಣ್ಗಾವಲು ಉದ್ದೇಶಕ್ಕಾಗಿ ಇಸ್ರೋ ನಿರ್ಮಿಸಿರುವ ಕಾರ್ಟೋಸ್ಯಾಟ್-2 ಉಪಗ್ರಹ ಮತ್ತು ವಿವಿಧ ದೇಶಗಳ ಇತರೆ 30 ಉಪಗ್ರಹಗಳನ್ನು ಹೊತ್ತಿದ್ದ ಪಿಎಎಸ್ ಎಲ್ ವಿ ಸಿ-38 ಉಡಾವಣಾ ವಾಹಕ ನಭಕ್ಕೆ ಜಿಗಿದಿದ್ದು, ಎಲ್ಲ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಪಿಎಸ್ ಎಲ್ ವಿ ಸಿ38 ರಾಕೆಟ್ ಹೊತ್ತ ಎಲ್ಲ ಉಪಗ್ರಹಗಳ ಒಟ್ಟು 955 ಕೆಜಿಯಾಗಿದ್ದು, ಕಾರ್ಟೋ ಸ್ಯಾಟ್ ಯಶಸ್ವಿ ಉಡಾವಣೆ ಮೂಲಕ ಭಾರತದ ಆಗಸದ ಗಡಿಯ ಮೇಲಿನ ಕಣ್ಣು ಮತ್ತಷ್ಟು ತೀಕ್ಷ್ಣ ವಾದಂತಾಗಿದೆ.

ಪ್ರಸ್ತುತ ಪಿಎಸ್ ಎಲ್ ವಿ ಸಿ38 ಹೊತ್ತ 31 ಉಪಗ್ರಹಗಳು ಭಾರತ ಸೇರಿದಂತೆ 13 ದೇಶಗಳಿಗೆ ಸೇರಿದ ಉಪಗ್ರಹಗಳಾಗಿದ್ದು, ಈ ಪೈಕಿ ಆಸ್ಟ್ರಿಯಾ, ಬೆಲ್ಜಿಯಂ, ಚಿಲಿ, ಜೆಕ್ ಗಣರಾಜ್ಯ, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಟ್ವಿಯಾ, ಲಿಥುವೇನಿಯಾ, ಸ್ಲೊವಾಕಿಯಾ, ಇಂಗ್ಲೆಂಡ್, ಅಮೆರಿಕಾ ಮತ್ತು ಭಾರತ ದೇಶಗಳಿಗೆ ಸೇರಿದ ಉಪಗ್ರಹಗಳಾಗಿವೆ.
ಪಿಎಸ್ಎಲ್ ವಿ-ಸಿ38 ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.29ಕ್ಕೆ ಉಡಾವಣೆಗೊಂಡಿತು.ಇದು ಪಿಎಸ್ಎಲ್ ವಿಯ 40ನೇ ವಾಹಕವಾಗಿದೆ.

ಉಡಾವಣೆಗೊಂಡ 16 ನಿಮಿಷಗಳ ನಂತರ ರಾಕೆಟ್ ಮುಖ್ಯ ಉಪಗ್ರಹವಾದ ಕಾರ್ಟೊಸಾಟ್-2 ಸರಣಿ ಉಪಗ್ರಹವನ್ನು ಭೂ ಕಕ್ಷೆಗೆ ಸೇರಿಸಿತು. ಕಾರ್ಟೊಸಾಟ್-2 ಸರಣಿಯಲ್ಲಿ ಇದು 6ನೇ ಉಪಗ್ರಹವಾಗಿದೆ.

ಒಂದು ನಾನೊ ಉಪಗ್ರಹವನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ನೂರುಲ್ ಇಸ್ಲಾಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಕಳೆದ ಫೆಬ್ರವರಿ 15ರಂದು ಪಿಎಸ್ಎಲ್ ವಿ-ಸಿ37 ರಾಕೆಟ್ ಮೂಲಕ ಇಸ್ರೊ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾಯಿಸಿದ ನಂತರ ಒಂದೇ ವಾಹಕದಲ್ಲಿ ಹಲವು ಉಪಗ್ರಹಗಳನ್ನು ಉಡಾಯಿಸುತ್ತಿರುವುದು ಇದು ಎರಡನೇ ಸಲ.

ಉಪಗ್ರಹದ ಯಶಸ್ವಿ ಉಡಾವಣೆ ನಂತರ ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್  ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದ್ದಾರೆ.

ಅಸಾಮಾನ್ಯ ಉಡಾವಣೆ: ಇದು ಸಾಮಾನ್ಯ ಉಡಾವಣೆಯಲ್ಲ ಎಂದು ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಕೆ.ಶಿವನ್ ಹೇಳಿದ್ದಾರೆ. ಉಪಗ್ರಹ ವಾಹಕದ ಉಡಾವಣೆಯ ನಿರ್ದೇಶಕ ಬಿ.ಜಯಕುಮಾರ್, 31 ಉಪಗ್ರಹಗಳ ಹೊರತಾಗಿ ವಾಹಕದಲ್ಲಿ ಇನ್ನೆರಡು ಪೆ ಲೋಡ್ ಗಳಿವೆ. 

ಈ ಕಾರ್ಯಾಚರಣೆಯ ಯಶಸ್ಸು ಪಿಎಸ್ಎಲ್ ವಿ ಯಾವುದೇ ಕಾರ್ಯಾಚರಣೆ ಮಾಡಬಹುದು, ಎಷ್ಟು ಉಪಗ್ರಹಗಳನ್ನು ಬೇಕಾದರೂ ಹೊತ್ತೊಯ್ಯಬಹುದು ಮತ್ತು ಹಲವು ಕಕ್ಷೆಗಳಲ್ಲಿ ಪ್ರಯಾಣಿಸಬಹುದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಪ್ರಮುಖ ಅಂಶಗಳು: ಕಾರ್ಟೊಸಾಟ್-2 ಸರಣಿಯಲ್ಲಿ 6ನೆಯದಾಗಿದ್ದು ಇದಕ್ಕೆ ಆಕಾಶದ ಮೇಲೆ ಭಾರತದ ಕಣ್ಣು ಎಂದು ಹೆಸರಿಡಲಾಗಿದೆ. 

ಭಾರತದಿಂದ ಒಂದೇ ಒಂದು ನ್ಯಾನೊ ಸ್ಯಾಟಲೈಟ್ ಅದು ನಿಯುಸಾಟ್, ಅದರ ತೂಕ 15 ಕಿಲೋ 

ವಿದೇಶಿ ಉಪಗ್ರಹಗಳ ಸಂಖ್ಯೆ 29, ಅಮೆರಿಕಾದ್ದು 10, ತಲಾ 3 ಉಪಗ್ರಹಗಳು ಬೆಲ್ಜಿಯಂ, ಇಟಲಿ ಮತ್ತು ಇಂಗ್ಲೆಂಡ್.

ತಲಾ 1 ಸ್ಯಾಟಲೈಟ್ ಗಳು ಆಸ್ಟ್ರಿಯಾ, ಚಿಲಿ, ಝೆಕ್ ಗಣರಾಜ್ಯ, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಜಪಾನ್, ಲಟ್ವಿಯಾ, ಲಿಥುವೇನಿಯಾ ಮತ್ತು ಸ್ಲೊವಾಕಿಯಾ ದೇಶಗಳದ್ದು. 
ಒಟ್ಟು ತೂಕ: 228 ಕಿಲೋ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com