ನವದೆಹಲಿ: ಜುಲೈ 17ರಿಂದ ರಾಷ್ಟ್ರಪತಿ ಚುನಾವಣೆ ಮತದಾನದೊಂದಿಗೆ ಲೋಕಸಭೆಯಲ್ಲಿ ಮಳೆಗಾಲದ ಅಧಿವೇಶನ ಶುರುವಾಗಲಿದೆ. .ಜುಲೈ 17ರಿಂದ ಆಗಸ್ಟ್ 11ರವರೆಗೆ ಮಳೆಗಾಲ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು ಮಾಡಿತ್ತು ಎಂದು ಸಮಿತಿಯ ಮೂಲಗಳಿಂದ ತಿಳಿದುಬಂದಿದೆ. .ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ನಾಮಪತ್ರ ಸಲ್ಲಿಸಿದ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ಕರೆದಿದ್ದರು. .ಲೋಕಸಭಾ ಸದಸ್ಯ ವಿನೋದ್ ಖನ್ನ ಮತ್ತು ರಾಜ್ಯಸಭಾ ಸದಸ್ಯ ಪಲ್ಲವಿ ರೆಡ್ಡಿ ಅವರು ನಿಧನ ಹಿನ್ನೆಲೆ ಮೊದಲ ದಿನದ ಅಧಿವೇಶನ ನಡೆಯುವುದಿಲ್ಲ ಎಂದು ಸಮಿತಿ ಹೇಳಿದೆ. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics