ಅಹಮದಾಬಾದ್: ಜಗನ್ನಾಥ ದೇಗುಲಕ್ಕೆ ಅಮಿತ್ ಶಾ ಭೇಟಿ, ಮಂಗಳ ಆರತಿಯಲ್ಲಿ ಭಾಗಿ

ಅಹಮದಾಬಾದ್'ಗೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಶ್ರೀ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದ್ದು, ಮಂಗಳ ಆರತಿಯಲ್ಲಿ ಭಾಗಿಯಾಗಿದ್ದಾರೆ...
ಅಹಮದಾಬಾದ್: ಜಗನ್ನಾಥ ದೇಗುಲಕ್ಕೆ ಅಮಿತ್ ಶಾ ಭೇಟಿ, ಮಂಗಳ ಆರತಿಯಲ್ಲಿ ಭಾಗಿ
ಅಹಮದಾಬಾದ್: ಜಗನ್ನಾಥ ದೇಗುಲಕ್ಕೆ ಅಮಿತ್ ಶಾ ಭೇಟಿ, ಮಂಗಳ ಆರತಿಯಲ್ಲಿ ಭಾಗಿ
ಅಹಮದಾಬಾದ್: ಅಹಮದಾಬಾದ್'ಗೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಶ್ರೀ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದ್ದು, ಮಂಗಳ ಆರತಿಯಲ್ಲಿ ಭಾಗಿಯಾಗಿದ್ದಾರೆ. 
ಇಂದು ಬೆಳಿಗ್ಗೆ ಅಹಮದಾಬಾದ್ ಗೆ ತೆರಳಿದ ಅಮಿತ್ ಶಾ ಅವರು ದೇಗುಲಕ್ಕೆ ಭೇಟಿ ನೀಡಿ ಜಗನ್ನಾಥನಿಗೆ ಸಲ್ಲಿಸಲಾಗುವ ಮಂಗಳ ಆರತಿಯಲ್ಲಿ ಭಾಗಿಯಾದರು. 
ಜಗದ್ವಿಖ್ಯಾತ ಪುರಿಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ದೇವಿಯರ ರಥೆ ಯಾತ್ರೆಯನ್ನು ನಡೆಸಲಾಗುತ್ತಿದೆ.  
ದೈವದೂತ ಕೃಷ್ಣ ತನ್ನ ಸಹೋದರ ಬಲಭದ್ರ ಹಾಗೂ ಸಹೋದರಿ ಸುಭದ್ರ ಅವರೊಂದಿಗೆ ವೃಂದಾವನಕ್ಕೆ ಹಿಂತಿರುಗಿ ಬರುವನೆಂಬ ನಂಬಿಕೆಯೊಂದಿಗೆ ಈ ಜಾತ್ರೆಯನ್ನು ಹಲವು ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಆ ಸಂಪ್ರದಾಯಕ್ಕೆ 5 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. 
ರಥ ಯಾತ್ರೆಯ ಭಾಗವಾಗಿ ಜಗನ್ನಾಥ, ಬಾಲಭದ್ರ ಹಾಗೂ ಸುಭದ್ರರ ಉತ್ಸವ ಮೂರ್ತಿಗಳನ್ನು ದೇವಾಲಯಗಳ ಆಕಾರದಲ್ಲಿ ನಿರ್ಮಿಸಿ ಸಿಂಗರಿಸಲಾದ ಮೂರು ರಥಗಳಲ್ಲಿ ಮೆರವಣಿಗೆ ಮಾಡುತ್ತ ಗುಂಡಿಚಾ ಮಂದಿರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಅಲ್ಲಿ 9 ದಿನಗಳ ಕಾಲ ತಂಗಿ ಮತ್ತೆ ಮುಖ್ಯ ದೇವಾಲಯಕ್ಕೆ ಮರಳಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com