ಐಎಫ್ ಹೆಲಿಕಾಫ್ಟರ್ ಮೇಲೆ ನಕ್ಸಲರಿಂದ ಗುಂಡಿನ ದಾಳಿ

ಗಾಯಗೊಂಡ ಯೋಧರಿಗಾಗಿ ನಿಯೋಜಿಸಲಾಗಿದ್ದ ಐಎಎಫ್ ಹೆಲಿಕಾಫ್ಟರ್ ನ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.
ಐಎಎಫ್ ಹೆಲಿಕಾಫ್ಟರ್
ಐಎಎಫ್ ಹೆಲಿಕಾಫ್ಟರ್
ಚತ್ತೀಸ್ ಗಢ: ಗಾಯಗೊಂಡ ಯೋಧರಿಗಾಗಿ ನಿಯೋಜಿಸಲಾಗಿದ್ದ ಐಎಎಫ್ ಹೆಲಿಕಾಫ್ಟರ್ ನ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ. 
ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿರುವ ದಾಳಿಯಲ್ಲಿ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿಗಳು ಮೃತಪಟ್ಟಿದ್ದು, 3 ಯೋಧರು ಗಾಯಗೊಂಡಿದ್ದಾರೆ. ಚತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಭದ್ರತಾ ಸಿಬ್ಬಂದಿಗಳು ಆಪರೇಷನ್ ಪ್ರಹಾರ್ ಎಂಬ ಕಾರ್ಯಾಚರಣೆ ನಡೆಸಿದ್ದರು. 
ಸಿಬ್ಬಂದಿಗಳನ್ನು ಸಾಗಿಸಲು ಭಾರತೀಯ ವಾಯುಪಡೆಯ ನಕ್ಸಲ್ ನಿಗ್ರಹ ಪಡೆಸಹ ಕಾರ್ಯಾಚರಣೆಗಿಳಿದಿದೆ. ಈ ವೇಳೆ ಗಾಯಗೊಂಡ ಯೋಧರಿಗಾಗಿ ನಿಯೋಜನೆ ಮಾಡಲಾಗಿದ್ದ ಐಎಎಫ್ ಹೆಲಿಕಾಫ್ಟರ್ ನ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ. 
ಭದ್ರತಾ ಪಡೆಗಳು-ನಕ್ಸಲರ ನಡುವೆ ಗುಂಡಿನ ಕಾರ್ಯಾಚರಣೆ ನಡೆದು ಹೆಚ್ಚಿನ ಹಾನಿ ಸಂಭವಿಸಿದರ ಬಗ್ಗೆ ಮಾಹಿತಿ ಪಡೆದ ಐಎಎಫ್ ನ ಟಾಸ್ಕ್ ಫೋರ್ಸ್ ಕಮಾಂಡರ್ ಹೆಲಿಕಾಫ್ಟರ್ ಗಳನ್ನು ನಿಯೋಜನೆ ಮಾಡಲು ನಿರ್ಧರಿಸಿದರು. ದಟ್ಟ ಕಾಡಿನ ನಡುವೆ ನಕ್ಸಲ್ ಪೀಡಿತ ಪ್ರದೇಶವಿದ್ದು, ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶವನ್ನು ಹೆಚ್ಚಿನ ಅಪಾಯವಿರುವ ಪ್ರದೇಶವನ್ನಾಗಿ ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com