ಕಾಂಗ್ರೆಸ್ ನಾಯಕತ್ವದ ವಿರುದ್ಧ ವಘೇಲಾ ಅಸಮಾಧಾನ: ಪಕ್ಷ ತೊರೆಯುವ ಮುನ್ಸೂಚನೆ

ಶಂಕರ್ ಸಿಂಗ್ ವಘೇಲಾ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ.
ಶಂಕರ್ ಸಿಂಗ್ ವಘೇಲಾ
ಶಂಕರ್ ಸಿಂಗ್ ವಘೇಲಾ
ಗಾಂಧಿನಗರ: ಶಂಕರ್ ಸಿಂಗ್ ವಘೇಲಾ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ. 
ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಕಾಂಗ್ರೆಸ್ ಮಾತ್ರ ಇನ್ನೂ ತಯಾರಿ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಂಕರ್ ಸಿಂಗ್ ವಘೇಲಾ, ಪಾಟಿದಾರ್, ದಲಿತ, ಒಬಿಸಿ ಬಿಕ್ಕಟುಗಳು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳಬಹುದಾದ ಅನೇಕ ಅಂಶಗಳಿವೆ. ಆದರೂ ಕಾಂಗ್ರೆಸ್ ಮಾತ್ರ ಅದ್ಯಾವುದರ ಲಾಭ ಪಡೆಯಲು ಯತ್ನಿಸುತ್ತಿಲ್ಲ. ಉತ್ತರ ಪ್ರದೇಶ ಚುನಾವಣೆಯನ್ನೂ ಇದೇ ರೀತಿ ಕಳೆದುಕೊಂಡರು.  ಕನಿಷ್ಠ ದೆಹಲಿಯಲ್ಲಿರುವವರಿಗೆ ಡಿಸೆಂಬರ್ ನಲ್ಲಿ ಗುಜರಾತ್  ಚುನಾವಣೆ ಇರುವುದಾದರೂ ನೆನಪಿದೆಯೇ ಎಂದು ವಘೇಲಾ ಪ್ರಶ್ನಿಸಿದ್ದಾರೆ. 
ಪಕ್ಷದ ನಾಯಕರಿಗೆ ದೂರದೃಷ್ಟಿಯೇ ಇಲ್ಲದಂತಾಗಿದೆ. ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂಬುದನ್ನು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಿಳಿಸುತ್ತೇನೆ ಎಂದು ವಘೇಲಾ ತಿಳಿಸಿದ್ದಾರೆ. " ಕಣ್ಣೆದುರಿಗೆ ದೊಡ್ಡ ಗುಂಡಿ ಇಟ್ಟುಕೊಂಡು ಅದರಲ್ಲೇ ಬೀಳುತ್ತೇವೆ ಎಂದರೆ ಏನೂ ಹೇಳಲು ಸಾಧ್ಯವಿಲ್ಲ. ಆದರೆ ನಾನು ಮಾತ್ರ ಬೀಳುವುದಿಲ್ಲ ಎಂದು ವಘೇಲಾ ಹೇಳಿದ್ದಾರೆ. 
ಸೋನಿಯಾ ಗಾಂಧಿ ನನ್ನನ್ನು ಗುಜರಾತ್ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಮಾಡಿದ್ದಾಗ ಅವರ ನಂಬಿಕೆ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ್ದೆ. ಆದರೆ ಈಗ ಈ ಬಗ್ಗೆ ಯೋಚನೆ ಮಾಡಬೇಕಾಗಿದೆ ಎನ್ನುವ ಮೂಲಕ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com