ಖಾಸಗೀಕರಣಗೊಳಿಸುವ ಮುನ್ನ ಬಾಕಿ ವೇತನ ನೀಡಲು ಏರ್ ಇಂಡಿಯಾ ಪೈಲಟ್ ಗಳ ಒತ್ತಾಯ

ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವುದು ಸ್ವಾಗತಾರ್ಹ ಕ್ರಮ. ಆದರೆ ಈ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವುದು ಸ್ವಾಗತಾರ್ಹ ಕ್ರಮ. ಆದರೆ ಈ ಹಿಂದೆ ಭರವಸೆ ನೀಡಿರುವಂತೆ ವೇತನ ಬಾಕಿಯನ್ನು ಮೊದಲು ಬಗೆಹರಿಸಬೇಕೆಂದು ಸಂಸ್ಥೆಯ ಪೈಲಟ್ ಗಳ ಬೇಡಿಕೆಯಾಗಿದೆ.
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಏರ್ ಇಂಡಿಯಾ 2012ರಲ್ಲಿ ವೇತನ ಕಡಿತ ಮಾಡಿತ್ತು. ಬಳಿಕ ಕೆಲವು ವಿಭಾಗದ ನೌಕರರು ಪರಿಷ್ಕೃತ ವೇತನವನ್ನು ಸ್ವೀಕರಿಸಿದ್ದು ಭತ್ಯೆಗಳನ್ನು ಸಂಗ್ರಹಿಸಲಾಯಿತು.
ಏರ್ ಇಂಡಿಯಾದ ಸುಮಾರು 27,000 ನೌಕರರು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸುಮಾರು 1,200 ಕೋಟಿ ರೂಪಾಯಿ ಭತ್ಯೆ ನೀಡಬೇಕಾಗಿದೆ. ಒಟ್ಟು ಮೊತ್ತದಲ್ಲಿ ಸುಮಾರು 400 ಕೋಟಿ ರೂಪಾಯಿ ಪೈಲಟ್ ಗಳಿಗೆ ನೀಡಲು ಬಾಕಿಯಿದೆ ಎಂದು ಹಿರಿಯ ಪೈಲಟ್ ವೊಬ್ಬರು ಹೇಳುತ್ತಾರೆ.
ಎರಡು ವರ್ಷಗಳ ಹಿಂದೆ ಏರ್ ಇಂಡಿಯಾಕ್ಕೆ ಸೇರಿಕೊಂಡಿದ್ದ ಅಶ್ವಿನ್ ಲೊಹನಿಗೆ ಅವರ ಬಾಕಿ ವೇತನವನ್ನು ಹಂತ ಹಂತವಾಗಿ ನೀಡಲಾಗುವುದೆಂದು ಭರವಸೆ ನೀಡಲಾಗಿತ್ತು. ಇದೀಗ ವಿಮಾನಯಾನದ ಪುನಶ್ಚೇತನಕ್ಕೆ ಸರ್ಕಾರ ಅದನ್ನು ಖಾಸಗೀಕರಣಗೊಳಿಸಲು ನಿರ್ಧರಿಸುತ್ತಿರುವಾಗ ಪೈಲಟ್ ಗಳು ತಮ್ಮ ಬಾಕಿ ಉಳಿಕೆ ವೇತನವನ್ನು ಮೊದಲು ನೀಡುವಂತೆ ಒತ್ತಾಯಿಸುತ್ತಿದ್ದಾರೆ.ಯಾವುದೇ ಉನ್ನತ ಮಟ್ಟದ ತೀರ್ಮಾನ ಕೈಗೊಳ್ಳುವ ಮುನ್ನ ಮುಂಬರುವ ಅನಿಶ್ಚಿತತೆಯನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಎಂದು ಭಾರತೀಯ ಪೈಲಟ್ ಗಳ ಸಂಘದ ಪ್ರತಿನಿಧಿಯೊಬ್ಬರು ಹೇಳುತ್ತಾರೆ.
ಸಾಲದಲ್ಲಿ ಮುಳುಗಿರುವ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಚರ್ಚಾ ಹಂತದಲ್ಲಿದ್ದರೂ ಕೂಡ ಕೆಲವು ಉದ್ಯೋಗಿಗಳು ಖಾಸಗೀಕರಣವನ್ನು ವಿರೋಧಿಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಏರ್ ಇಂಡಿಯಾದ ಏಳು ಒಕ್ಕೂಟಗಳು ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದವು.
ಕೇಂದ್ರ ಸರ್ಕಾರದ ವಿಚಾರ ವೇದಿಕೆ ನೀತಿ ಆಯೋಗ, ವಿಮಾನಯಾನವನ್ನು ಸಂಪೂರ್ಣ ಖಾಸಗೀಕರಣಗೊಳಿಸಬೇಕೆಂದು ಸೂಚಿಸಿದೆ. ಏರ್ ಇಂಡಿಯಾ ಸುಮಾರು 52,00 ಕೋಟಿ ರೂಪಾಯಿಗೂ ಅಧಿಕ ಸಾಲದಲ್ಲಿ ಬಳಲುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com