ಶಾಲಾ ಪಠ್ಯಕ್ರಮದಲ್ಲಿ 'ತುರ್ತು ಪರಿಸ್ಥಿತಿ' ಅಧ್ಯಾಯ ಸೇರಿಸಲು ವೆಂಕಯ್ಯ ನಾಯ್ಡು ಆಗ್ರಹ

ತುರ್ತು ಪರಿಸ್ಥಿತಿಯ ಅಧ್ಯಾಯವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ನವದೆಹಲಿ: ತುರ್ತು ಪರಿಸ್ಥಿತಿಯ ಅಧ್ಯಾಯವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. 
ಒಂದು ಪೀಳಿಗೆ ಎದುರಿಸಿದ ಐತಿಹಾಸಿಕ ಗಾಯದ ಗುರುತಾಗಿದ್ದ ತುರ್ತುಪರಿಸ್ಥಿತಿ ಇಂದು ಕುತೂಹಲದ ಸಂಗತಿಯಾಗಿದೆ. ಇಂದಿನ ಯುವ ಪೀಳಿಗೆಗೆ ತುರ್ತು ಪರಿಸ್ಥಿತಿಯ ಬಗ್ಗೆ ಅಷ್ಟಾಗಿ ಅರಿವಿಲ್ಲ. ಕೆಲವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ನೀಡಲಾಗಿದ್ದ ಹಿಂಸೆಯ ಬಗ್ಗೆ ಉರು ಹೊಡೆಯುತ್ತಿದ್ದಾರೆ. ತುರ್ತು ಪರಿಸ್ಥಿತಿ ಕಳೆದು 4 ದಶಕಗಳಾಗಿವೆ, ಅದನ್ನು ಮರೆಯಬಾರದು, ಮನ್ನಿಸಲೂಬಾರದು, ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. 
ತುರ್ತು ಪರಿಸ್ಥಿತಿ ಎಂದರೆ ಏನು? ಅದರ ಪರಿಣಾಮ ಏನಾಯಿತು. ತುರ್ತು ಪರಿಸ್ಥಿತಿಯನ್ನು ಹೇಗೆ ವಾಪಸ್ ತೆಗೆದುಕೊಳ್ಳಲಾಯಿತು ಎಂಬುದನ್ನು ಯುವ ಪೀಳಿಗೆ ಅರಿಯಬೇಕು, ಆದ್ದರಿಂದ ಶಾಲಾ ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಬೇಕಿದೆ ಎಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com