ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಟ್ಸಾಪ್ ಡಿಪಿಯಲ್ಲಿ ರೇಖಾ ಚಿತ್ರ ಬಳಕೆ: ಮುಸ್ಲಿಂ ಶಿಕ್ಷಕನ ಬಂಧನ

ಧಾನಿ ನರೇಂದ್ರ ಮೋದಿ ಅವರ ಆಕ್ಷೇಪಾರ್ಹ ರೇಖಾ ಚಿತ್ರವನ್ನು ವಾಟ್ಸಾಪ್ ಪ್ರೊಫೈಲ್ ಪಿಕ್ಟರ್ ಆಗಿ ಬಳಸಿದ ಆಸ್ಸಾಂನ ಮುಸ್ಲಿಂ ಶಿಕ್ಷಕನನ್ನು...
Published on
ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ಆಕ್ಷೇಪಾರ್ಹ ರೇಖಾ ಚಿತ್ರ ವನ್ನು ವಾಟ್ಸಾಪ್ ಪ್ರೊಫೈಲ್ ಪಿಕ್ಟರ್ ಆಗಿ ಬಳಸಿದ ಆಸ್ಸಾಂನ ಮುಸ್ಲಿಂ ಶಿಕ್ಷಕನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್  ಹಮೀದ್ ಬಾರ್ಬೂಯಾ ಬಂಧಿತ ಶಿಕ್ಷಕ, ಈತನ ವಾಟ್ಸಾಪ್ ಡಿಪಿಯಲ್ಲಿ ಎರಡು ಚಿತ್ರಗಳಿದ್ದು, ಒಂದು ಚಿತ್ರದಲ್ಲಿ ಮೋದಿ ಮತ್ತು ನಾಯಿಯ ಮುಖವಿದ್ದು, ಕರ್ತವ್ಯನಿರತ ನಾಯಿ ಎಂಬ ಶೀರ್ಷಿಕೆ ಬಳಸಲಾಗಿದೆ.
ಆತನ ಕಾಂಟ್ಯಾಕ್ಟ್ ನಲ್ಲಿರುವವರೆಲ್ಲರೂ ಈ ಡಿಪಿಯನ್ನು ನೋಡಬಹುದಾಗಿತ್ತು. ಮಂಗಳವಾರ ಅದನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿರುವುದಾಗಿ  ಳಿಸಿದ್ದಾರೆ.
ಚಿತ್ರದ ಬಗ್ಗ ಆತನಿಗೆ ಅರಿವಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ, ಐಟಿ ಕಾಯಿದೆ 66(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಸ್ಸಾಂನ ಹಿಲಕಾಂಡಿ ಜಿಲ್ಲೆಯ ಜ್ಞಾನಕಿ ಚರಣ್ ಹೈಯ್ಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com