ಉಗ್ರರ ಬೆದರಿಕೆ ನಡುವೆಯೂ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಆರಂಭ

ಉಗ್ರರ ಬೆದರಿಕೆ ನಡುವೆಯೂ ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಅಮರನಾಥ ಯಾತ್ರೆ ಗುರುವಾರದಿಂದ ಆರಂಭಗೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಉಗ್ರರ ಬೆದರಿಕೆ ನಡುವೆಯೂ ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಅಮರನಾಥ ಯಾತ್ರೆ ಗುರುವಾರದಿಂದ ಆರಂಭಗೊಂಡಿದೆ. 
ಅಮರನಾಥ ಯಾತ್ರೆ ಸಂದರ್ಭದಲ್ಲಿ ಪೊಲೀಸರು ಹಾಗೂ ಯಾತ್ರಿಗಳ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆಂದು ನಿನ್ನೆಯಷ್ಟೇ ಗುಪ್ತಚರ ಇಲಾಖೆ ಎಚ್ಚರಿಸಿತ್ತು. 
ಗುಪ್ತಚರ ಇಲಾಖೆಯಂತೆಯೇ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ಯಾತ್ರಿಕರ ರಕ್ಷಣೆಗೆ ಭದ್ರತಾಯ ವ್ಯವಸ್ಥೆಯನ್ನು ಕಲ್ಪಿಸಿದೆ. 
ಕಾಶ್ಮೀರದಲ್ಲಿ ಈಗಾಗಲೇ ಸೇನಾ ಪಡೆ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. 
ಬೆದರಿಕೆ ಹಿನ್ನಲೆಯಲ್ಲಿ ಮತ್ತಷ್ಟು 5,000 ಭದ್ರತಾ ಪಡೆಗಳನ್ನು ಅಮರನಾಥ ಯಾತ್ರೆ ವೇಳೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಕಣ್ಗಾವಲಿರಿಸಲಾಗಿದೆ. 
ಅಮರನಾಥ್ ಯಾತ್ರೆಗೆ ಈಗಾಗಲೇ 2 ಬೆಟಾಲಿಯನ್ ಪಡೆಗಳನ್ನು ನಿಯೋದಿರಲಾಗಿದೆ. ಹೆಚ್ಚುವರಿಯಾಗಿ ದಕ್ಷಿಣ ಕಾಶ್ಮೀರದಲ್ಲಿ 3 ಬೆಟಾಲಿಯನ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಜೆ.ಎಸ್.ಸಂಧು ಹೇಳಿದ್ದಾರೆ. 
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗದಿಂದ ಶಿವಲಿಂಗ ದರ್ಶನಕ್ಕೆ ಯಾತ್ರಾರ್ಥಿಗಳು ತೆರಳುತ್ತಿದ್ದಾರೆ. ಕಾಶ್ಮೀರದಲ್ಲಿ ಈಗಾಗಲೇ ಪರಿಸ್ಥಿತಿ ಹದಗೆಟ್ಟಿದ್ದು, ಯಾತ್ರೆ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕಲ್ಲು ತೂರಾಟಗಾರರು ಹಿಂಸಾಚಾರ ಸೃಷ್ಟಿಸುವ ಸಾಧ್ಯತೆಗಳಿದ್ದು, ಯಾತ್ರಾರ್ಥಿಗಳ ರಕ್ಷಣೆ ಇದೀಗ ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದೇ ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com