ನೇತಾಜಿ ಮುಲಾಯಂಗೆ ನನ್ನ ಮೇಲೆ ಕೋಪವಿದೆ: ಅಖಿಲೇಶ್ ಯಾದವ್

ನನ್ನ ತಂದೆ ಮುಲಾಯಂ ಸಿಂಗ್ ಯಾದವ್ ಅವರಿಗೆ ನನ್ನ ಮೇಲೆ ಕೋಪವಿರುವುದು ನಿಜ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುರುವಾರ ಹೇಳಿದ್ದಾರೆ...
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್
Updated on
ಇಟಾವಾ: ನನ್ನ ತಂದೆ ಮುಲಾಯಂ ಸಿಂಗ್ ಯಾದವ್ ಅವರಿಗೆ ನನ್ನ ಮೇಲೆ ಕೋಪವಿರುವುದು ನಿಜ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುರುವಾರ ಹೇಳಿದ್ದಾರೆ. 
ಸಂಬಂಧಿ ರಾಮ್ ಗೋಪಾಲ್ ಯಾದವ್ ಅವರ 71 ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿರುವ ಅವರು, ರಾಮ್ ಗೋಪಾಲ್ ಅವರ ಮೇಲೆ ತಂದೆಯವರಿಗೆ ಯಾವುದೇ ರೀತಿಯ ಕೋಪವಿಲ್ಲ. ಆದರೆ, ಅವರಿಗೆ ನನ್ನ ಮೇಲೆ ಕೋಪವಿದೆ. ಹೀಗಾಗಿಯೇ ಅವರು ಇಂದಿನ ಕಾರ್ಯಕ್ರಮಕ್ಕೂ ಬಂದಿಲ್ಲ ಎಂದು ಹೇಳಿದ್ದಾರೆ. 
ಸಮಾಜವಾದಿ ಪಕ್ಷವನ್ನು ಮುಂದಕ್ಕೆ ತಲು ರಾಮ್ ಗೋಪಾಲ್ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷವನ್ನು ಹಾಗೂ ಪಕ್ಷದ ಚಿಹ್ನೆಯನ್ನು ಅವರು ರಕ್ಷಿಸಿದ್ದಾರೆ. ಅವರ ನಾಯಕತ್ವ ಹಾಗೂ ನಿರ್ದೇಶನದಿಂದಲೇ ಪಕ್ಷ ಅತೀ ದೊಡ್ಡ ಕೆಲಸಗಳನ್ನು ಹಾಗೂ ಅಭಿವೃದ್ಧಿ ಯೋಜನಾ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. 
 ಆಗ್ರಾದಿಂದ ಲಖನೌವರೆಗೂ ಎಕ್ಸ್ ಪ್ರೆಸ್ ಮಾರ್ಗವನ್ನು 22 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಇಷ್ಟೊಂದು ಕಡಿಮೆ ಸಮಯದಲ್ಲಿ ಯಾವುದೇ ಸರ್ಕಾರ ಇಷ್ಟು ದೊಡ್ಡ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com