ಮದುವೆ ಮಂಟಪದಲ್ಲಿ ಕುಡಿದು ವರನ 'ಸ್ನೇಕ್ ಡ್ಯಾನ್ಸ್', ಮದುವೆ ಬೇಡ ಅಂದ ವಧು!

ಭಾರತೀಯ ಮದುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ ಕುಡಿದು ನಾಗಿನ್(ಸ್ನೇಕ್) ಡ್ಯಾನ್ಸ್...
ನಾಗಿನ್ ಡ್ಯಾನ್ಸ್ ಮಾಡುತ್ತಿರುವ ವರ ಮತ್ತು ಸ್ನೇಹಿತರು
ನಾಗಿನ್ ಡ್ಯಾನ್ಸ್ ಮಾಡುತ್ತಿರುವ ವರ ಮತ್ತು ಸ್ನೇಹಿತರು
Updated on
ಶಹಜಹಾನ್‍ಪುರ: ಭಾರತೀಯ ಮದುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ ಕುಡಿದು ನಾಗಿನ್(ಸ್ನೇಕ್) ಡ್ಯಾನ್ಸ್ ಮಾಡಿದ್ದರಿಂದ ವಧು ಆತನೊಂದಿಗೆ ಮದುವೆಯನ್ನು ತಿರಸ್ಕರಿಸಿದ್ದಾಳೆ. 
ವರ ಕುಡಿದು ಅಸಭ್ಯವಾಗಿ ಡ್ಯಾನ್ಸ್ ಮಾಡಿದ್ದರಿಂದ ನೊಂದ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ವರ ಹಾಗೂ ಆತನ ಪೋಷಕರು ವಧುವಿನ ಮನವೊಲಿಸಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗದೇ ಬರಿಗೈಲಿ ಹಿಂದಿರುಗಿದ್ದಾರೆ. 
ಒಂದೇ ಸಮುದಾಯಕ್ಕೆ ಸೇರಿದ್ದ 23 ವರ್ಷದ ಪ್ರಿಯಾಂಕಾ ತ್ರಿಪಾಠಿ ಮತ್ತು ಅನುಭವ ಮಿಶ್ರಾರ ಮದುವೆಯನ್ನು ಪೋಷಕರು ನಿಗದಿ ಮಾಡಿದ್ದರು. ಅಂತೆ ಎಲ್ಲಾ ಸುಸುತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನು ಕುಡಿತದ ಅಮಲಿನಲ್ಲಿ ಮಾಡಿದ ಯಡವಟ್ಟು ದೊಡ್ಡ ಪಜೀತಿಯನ್ನೇ ಮಾಡಿದೆ. 
ಕಲ್ಯಾಣ ಮಂಟಪಕ್ಕೆ ಬಂದ ವಧುವಿನ ಕಡೆಯವರನ್ನು ಬರಮಾಡಿಕೊಳ್ಳಲು ವರ ಬ್ಯಾಂಡ್ ಸೆಟ್ ಜತೆ ತೆರಳಿದ್ದ ಈ ವೇಳೆ ವಧುವಿನ ಕಡೆಯವರ ಮುಂದೆ ಸ್ನೇಹಿತರ ಜತೆ ವರ ಹುಚ್ಚಾಪಟ್ಟೆ ಡ್ಯಾನ್ಸ್ ಮಾಡಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ವಧು ಕುಡುಕನ ಜತೆ ನಾನು ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದ್ದರಿಂದ ಮದುವೆಯನ್ನು ನಿಲ್ಲಿಸಬೇಕಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com