ಸುದ್ದಿವಾಹಿನಿ ಅ್ಯಂಕರ್ ಕೇಳಿದ ಅವಮಾನಕರ ಪ್ರಶ್ನೆ ಸೀಮಿತ ದಾಳಿಗೆ ಕಾರಣವಾಯಿತು: ಪರಿಕ್ಕರ್

ಸುದ್ದಿವಾಹಿನಿಯೊಂದರ ಆ್ಯಂಕರ್ ಒಬ್ಬರು ಕೇಳಿದ ಅವಮಾನಕರ ಪ್ರಶ್ನೆಯೊಂದು ಪಿಒಕೆ ಉಗ್ರರ ನೆಲೆಗಳ ಮೇಲಿನ ಸೀಮಿತ ದಾಳಿಗೆ ಯೋಜನೆ ರೂಪಿಸುವಂತೆ ಮಾಡಿತ್ತು ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್...
ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
ಪಣಜಿ: ಸುದ್ದಿವಾಹಿನಿಯೊಂದರ ಆ್ಯಂಕರ್ ಒಬ್ಬರು ಕೇಳಿದ ಅವಮಾನಕರ ಪ್ರಶ್ನೆಯೊಂದು ಪಿಒಕೆ ಉಗ್ರರ ನೆಲೆಗಳ ಮೇಲಿನ ಸೀಮಿತ ದಾಳಿಗೆ ಯೋಜನೆ ರೂಪಿಸುವಂತೆ ಮಾಡಿತ್ತು ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಹೇಳಿದ್ದಾರೆ. 
ಪಣಜಿಯಲ್ಲಿ ಉದ್ಯಮಿಗಳನ್ನುದ್ದೇಶಿ ಮಾತನಾಡುತ್ತಿದ್ದ ವೇಳೆ ಸೀಮಿತ ದಾಳಿ ಕುರಿತಂತೆ ಮಾತನಾಡಿರುವ ಪರಿಕ್ಕರ್ ಅವರು, ಸುದ್ದಿವಾಹಿನಿಯ ವಾಚಕರೊಬ್ಬರು ಕೇಳಿದ್ದ ಅವಮಾನಕರ ಪ್ರಶ್ನೆಯೇ ಸೀಮಿತ ದಾಳಿಗೆ ಯೋಜನೆ ರೂಪಿಸಲು ಕಾರಣವಾಗಿತ್ತು. ದಾಳಿಗೆ 15 ತಿಂಗಳಿಗೂ ಮೊದಲೇ ಯೋಜನೆ ರೂಪಿಸಲಾಗಿತ್ತು ಎಂದು ಹೇಳಿದ್ದಾರೆ. 
2015ರ ಜೂ.4 ರಂದು ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದರು. ದಾಳಿಯಲ್ಲಿ 18 ಯೋಧರು ಹುತಾತ್ಮರಾಗಿದ್ದರು. ಮಣಿಪುರದಲ್ಲಿರುವ ಎನ್'ಎಸ್'ಸಿಎಸ್-ಕೆ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ನಡೆಸಿದ್ದರು. 200 ಮಂದಿಯಿದ್ದ ಒಂದು ಚಿಕ್ಕ ಉಗ್ರ ಸಂಘಟನೆ 18 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದು, ಸೇನೆಗೆ ಅವಮಾನ ಎಂದೇ ಭಾವಿಸಿದ್ದೆವು. 
ಇದರಂತೆ ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಜೂ.6 ರಂದು ಸೀಮಿತ ದಾಳಿ ನಡೆಸಿದ್ದ ಸೇನೆ 70-80 ಉಗ್ರರನ್ನು ಹತ್ಯೆ ಮಾಡಿತ್ತು. ಅದು ಅತ್ಯಂತ ಯಶಸ್ವಿ ಸೀಮಿತ ದಾಳಿಯಾಗಿತ್ತು. ಕೆಲ ಮಾಧ್ಯಮಗಳು ಸೀಮಿತ ದಾಳಿಗೆ ಹೆಲಿಕ್ಯಾಪ್ಟರ್ ಗಳನ್ನು ಬಳಕೆ ಮಾಡಲಾಗಿತ್ತು ಎಂದು ವರದಿ ಮಾಡಿದ್ದವು. ಆದರೆ, ಅಗತ್ಯ ಬಿದ್ದಾಗ ಯೋಧರನ್ನು ಸ್ಥಳಾಂತರಿಸುವ ಸಲುವಾಗಿ ಮಾತ್ರ ಹೆಲಿಕ್ಯಾಪ್ಟರ್ ಗಳನ್ನು ಸನ್ನದ್ಧಗೊಳಿಸಲಾಗಿತ್ತು ಅಷ್ಟೇ. ಹೆಲಿಕ್ಯಾಪ್ಚರ್ ಗಳನ್ನು ಬಳಕೆ ಮಾಡಿರಲಿಲ್ಲ. 
ನೋವು ತಂದ ವಿಚಾರವೆಂದರೆ ಟಿವಿ ಆ್ಯಂಕರ್ ವೊಬ್ಬರು ಕೇಳಿದ್ದ ಅವಮಾನಕ ಪ್ರಶ್ನೆ. ಮ್ಯಾನ್ಮಾರ್ ಗಡಿಯಲ್ಲಿ ನಡೆಸಲಾದ ಸೀಮಿತ ದಾಳಿ ಕುರಿತಂತೆ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ರಾಥೋಡ್ ಅವರನ್ನು ಪ್ರಶ್ನಿಸಿದ್ದ ಆ್ಯಂಕರ್, ಈಶಾನ್ಯ ಗಡಿಯಲ್ಲಿ ತೋರಿದ ಇದೇ ಧೈರ್ಯವನ್ನು ನೀವು ಪಶ್ಚಿಮದ ಗಡಿಯಲ್ಲೂ ಪ್ರದರ್ಶಿಸಲು ಸಿದ್ಧರಿದ್ದೀರಾ ಎಂದು ಅವಮಾನಕರ ರೀತಿಯಲ್ಲಿ ಪ್ರಶ್ನೆ ಹಾಕಿದ್ದರು. 
ಈ ವೇಳೆ ಸಮಯ ಬಂದಾಗ ಇದಕ್ಕೆ ಉತ್ತರ ನೀಡಬೇಕೆಂದು ಆಗಲೇ ನಾನು ನಿರ್ಧರಿಸಿದ್ದೆ. 2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ನಿರ್ದಿಷ್ಟ ದಾಳಿಗೆ ಆಗಲೇ ನನಗೆ ಪ್ರೇರಣೆ ದೊರೆತಿತ್ತು. ಕೊನೆಗೆ 15 ತಿಂಗಳ ಹಿಂದೆಯೇ ಯೋಜನೆ ರೂಪಿಸಿ ಮ್ಯಾನ್ಮಾರ್ ಗಡಿಯಲ್ಲಿ ನಡೆಸಿದಂತೆಯೇ ಪಶ್ಚಿಮ ಭಾಗದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 2016ರ ಸೆಪ್ಟೆಂಬರ್ 29ರಂದು  ಸೀಮಿತ ದಾಳಿ ನಡೆಸಲಾಯಿತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com