ಪುಲ್ವಾಮದಲ್ಲಿ ಗ್ರೆನೇಡ್ ದಾಳಿ: ಓರ್ವ ನಾಗರೀಕ ಸಾವು, 2 ಯೋಧರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ನಾಗರೀಕ ಸಾವನ್ನಪ್ಪಿ ಇಬ್ಬರು ಯೋಧರಿಗೆ ಗಾಯವಾಗಿರುವ ಘಟನೆ...
ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ನಾಗರೀಕ ಸಾವನ್ನಪ್ಪಿ ಇಬ್ಬರು ಯೋಧರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.
ಪುಲ್ವಾಮಾದ ಮುರಾನ್ ಚೌಕ್ ಎಂಬಲ್ಲಿ ಉಗ್ರರು ಭದ್ರತಾ ಪಡೆಗಳಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಗಾಯಗೊಂಡವರಲ್ಲಿ ಪೊಲೀಸ್ ಹಾಗೂ ಸಿಆರ್ ಪಿಎಫ್ ಸಿಬ್ಬಂದಿಗಳೂ ಸೇರಿದ್ದಾರೆಂದು ಮೂಲಗಳು ತಿಳಿಸಿವೆ.
ಗಾಯಗೊಂಡ ಸಿಆರ್ ಪಿಎಫ್ ಯೋಧನ್ನು ದಲ್ಜಿತ್ ಕಿರಣ್ ಎಂದು ಹೇಳಲಾಗುತ್ತಿದ್ದು, ಮೃತಪಟ್ಟ ನಾಗರೀಕನನ್ನು ಮುಹಮ್ಮದ್ ಅಯೂಬ್ ವಾನಿ ಎಂದು ಗುರ್ತಿಸಲಾಗಿದೆ.
ದಾಳಿ ನಡೆದ ಪ್ರದೇಶದ ಸುತ್ತಲೂ ಸೇನಾ ಪಡೆ ಸುತ್ತುವರೆದಿದ್ದು, ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.