ನಿಯಮ ಬಾಹಿರವಾಗಿ ಗಿಲಾನಿ ಮೊಮ್ಮಗನಿಗೆ ಉದ್ಯೋಗ ನೀಡಿಲ್ಲ: ಅಧಿಕಾರಿಗಳ ಸ್ಪಷ್ಟನೆ

ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗಿಲಾನಿಯವರ ಮೊಮ್ಮಗನಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿಯಮ ಬಾಹಿರವಾಗಿ ಸರ್ಕಾರಿ ಉದ್ಯೋಗ...
ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗಿಲಾನಿ
ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗಿಲಾನಿ
ಶ್ರೀನಗರ: ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗಿಲಾನಿಯವರ ಮೊಮ್ಮಗನಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿಯಮ ಬಾಹಿರವಾಗಿ ಸರ್ಕಾರಿ ಉದ್ಯೋಗ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. 
ಗಿಲಾನಿಯವರ ಮೊಮ್ಮಗ ಅನೀಸ್ ಉಮ್ ಇಸ್ಲಾಂಗೆ ಶೇರ್ ಎ ಕಾಶ್ಮೀರ್ ಇಂಟರ್ ನ್ಯಾಷನಲ್ ಕಂನ್ವೆಂಷನ್ ಕಾಂಪ್ಲೆಕ್ಸ್ (ಎಸ್'ಕೆಐಸಿಸಿ)ಯಲ್ಲಿ ಸಂಶೋಧನ ಅಧಿಕಾರಿಯಾಗಿ ಉದ್ಯೋಗ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಬರುವ ಈ ಸಂಸ್ಥೆಯಲ್ಲಿ ಗಿಲಾನಿ ಅವರ ಮೊಮ್ಮಗನಿಗೆ ಉದ್ಯೋಗ ನೀಡಲು ನಿಯಮಗಳ್ನು ಬದಲಿಸಲಾಗಿದೆ ಎಂದು ಮಾತುಗಳು ಕೇಳಿ ಬಂದಿವೆ. ಪ್ರಸ್ತುತ ಗಿಲಾನಿ ಅವರ ಮೊಮ್ಮಗನಿಗೆ ವಾರ್ಷಿಕ ರೂ. 12 ಲಕ್ಷ ವೇತ ದೊರೆಯುತ್ತಿದ್ದು, ಇದರೊಂದಿಗೆ ಪಿಂಚಣಿ ಸೌಲಭ್ಯ ಕೂಡ ಒದಗಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. 
ಗಿಲಾನಿ ಮೊಮ್ಮಗನಿಗೆ ಸರ್ಕಾರಿ ಉದ್ಯೋಗ ನೀಡಿರುವ ಕುರಿತಂತೆ ಸ್ಪಷ್ಟನೆ ನೀಡಿರುವ ಎಸ್'ಕೆಐಸಿಸಿ ವಕ್ತಾರ ಶಹನ್ವಾಜ್ ಶಾ ಅವರು, ಉದ್ಯೋಗ ಸೃಷ್ಟಿಸಿರುವ ಬಗ್ಗೆ ಪ್ರಶ್ನೆ ಎತ್ತುವ ಹಾಗಿಲ್ಲ. ಯಾರ ಪ್ರಭಾವದ ಮೇಲೂ ಗಿಲಾನಿ ಮೊಮ್ಮಗನಿಗೆ ನಾವು ಉದ್ಯೋಗವನ್ನು ನೀಡಿಲ್ಲ ಎಂದು ಹೇಳಿದ್ದಾರೆ. 
ಗಿಲಾನಿ ಮೊಮ್ಮಗನಿಗೆ ರೂ.35 ಸಾವಿರ ವೇತನ ನೀಡಲಾಗುತ್ತಿದ್ದು, ಅದೂ ಕೂಡ ಸರ್ಕಾರ ನೀಡುತ್ತಿಲ್ಲ. ಸಂಸ್ಥೆಯೊಂದು ನೀಡುತ್ತಿದೆ. ಅನೀಸ್ ಗೆ ಸರ್ಕಾರ ಯಾವುದೇ ರೀತಿಯ ಪಿಂಚಣಿ ಹಣವನ್ನು ನೀಡುತ್ತಿಲ್ಲ. ಎಸ್'ಕೆಐಸಿಸಿ ಸ್ವಾಯತ್ತ ಪ್ರಚಾರ ಸಮಾಜಕ್ಕೆ ಸೇರಿದ್ದಾಗಿದ್ದು, ಸೂಕ್ತ ರೀತಿಯ ಜಾಹೀರಾತುಗಳಿಗಾಗಿ ಸಂಶೋಧನಾಧಿಕಾರಿಗಳ ಅಗತ್ಯವಿತ್ತು. ಖಾಲಿಯಿದ್ದ ಉದ್ಯೋಗಕ್ಕೆ 196 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 35 ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗಿತ್ತು. ಇದರಂತೆ ನವೆಂಬರ್ 1 ರಂದು ಪ್ರಕಟಣೆಯನ್ನು ತಿಳಿಸಲಾಗಿತ್ತು. 
ಸಾಮಾನ್ಯದಂತೆಯೇ ಆಯ್ಕೆಯಾದ ಅಭ್ಯರ್ಥಿಗಳನ್ನು 2016 ನವೆಂಬರ್ 5 ರಂದು ಸಂದರ್ಶನಕ್ಕೆ ಕರೆಯಲಾಗಿತ್ತು. ಆಯ್ಕೆ ಸಮಿತಿ ಸಂದರ್ಶನ ನಡೆಸಿತ್ತು. 35ರಲ್ಲಿ 32 ಮಂದಿ ಅಭ್ಯರ್ಥಿಗಳು ಸಂದರ್ಶನಕ್ಕೆ ಬಂದಿದ್ದರು. ಎಸ್'ಕೆಐಸಿಸಿ ನಿಯಮ ಹಾಗೂ ಪ್ರಕ್ರಿಯೆಗಳಂತೆಯೇ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. 
ಉದ್ಯೋಗಕ್ಕೆ ಬೇಕಿದ್ದ ಅರ್ಹತೆಗಳನ್ನು ಅನೀಸ್ ಹೊಂದಿದ್ದ. ಪ್ರತೀಯೊಬ್ಬ ಅಭ್ಯರ್ಥಿಯ ಆಯ್ಕೆಗೂ ಸಿಐಡಿ ಪರಿಶೀಲನೆ ಕಡ್ಡಾಯವಾಗಿತ್ತು. ಇದರಂತೆ ಅನೀಸ್ ಅವರ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com