ಅಮೆರಿಕಾದಲ್ಲಿ ಸಿಖ್ ವ್ಯಕ್ತಿ ಮೇಲೆ ಗುಂಡಿನ ದಾಳಿ: ಕುಟುಂಬದವರಿಗೆ ಸಾಂತ್ವನ ಹೇಳಿದ ಸುಷ್ಮಾ ಸ್ವರಾಜ್

ಅಮೆರಿಕಾದ ಸೀಟ್ಲ್ ನಲ್ಲಿ ಮುಖವಾಡ ಧರಿಸಿದ ಬಂದೂಕುಧಾರಿಯಿಂದ ಗಾಯಗೊಂಡಿದ್ದ ಸಿಖ್ ವ್ಯಕ್ತಿ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಅಮೆರಿಕಾದ ಸೀಟ್ಲ್ ನಲ್ಲಿ ಮುಖವಾಡ ಧರಿಸಿದ ಬಂದೂಕುಧಾರಿಯಿಂದ ಗಾಯಗೊಂಡಿದ್ದ ಸಿಖ್ ವ್ಯಕ್ತಿ ಅಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ವಿದೇಶಾಂಗ ಖಾತೆ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಇಂದು ಈ ವಿಷಯ ತಿಳಿಸಿರುವ ಅವರು, ಭಾರತೀಯ ಮೂಲದ ಅಮೆರಿಕಾ ಪ್ರಜೆ ದೀಪ್ ರಾಯ್ ಮೇಲೆ ಮುಖಕ್ಕೆ ಮಾಸ್ಕ್ ಹಾಕಿದ್ದ ವ್ಯಕ್ತಿ ಗುಂಡು ಹಾರಿಸಿದ್ದು ಸ್ವಲ್ಪದರಲ್ಲಿಯೇ ಅವರು ಬದುಕುಳಿದಿದ್ದಾರೆ. ಅವರ ತಂದೆ ಸರ್ದಾರ್ ಹರ್ಪಲ್ ಸಿಂಗ್ ಅವರೊಂದಿಗೆ ಮಾತನಾಡಿದ್ದು ಅವರ ಆರೋಗ್ಯದ ಬಗ್ಗೆ ಕೇಳಿ ತಿಳಿದುಕೊಂಡೆ ಎಂದು ಹೇಳಿದ್ದಾರೆ.
ಮೊನ್ನೆ ಹತ್ಯೆಗೀಡಾಗಿದ್ದ ಹರ್ನಿಶ್ ಪಟೇಲ್ ಅವರ ಕುಟುಂಬದವರ ಜೊತೆಗೂ ಸಹ ಮಾತನಾಡಿ ಸಾಂತ್ವನ ತಿಳಿಸಿರುವ ಸುಷ್ಮಾ ಸ್ವರಾಜ್ ಪ್ರಕರಣದ ತನಿಖೆ ತ್ವರಿತವಾಗಿ ನಡೆಸಲು ಆದೇಶಿಸುವುದಾಗಿ ಭರವಸೆ ನೀಡಿದ್ದಾರೆ.
ಗುಂಡಿನ ದಾಳಿಗೆ ಗಾಯಗೊಂಡಿರುವ ಸಿಖ್ ವ್ಯಕ್ತಿ ದಿಲೀಪ್ ರಾಯ್, ಅಪಾಯದಿಂದ ಪಾರಾಗಿದ್ದು, ಇದೊಂದು ಗಂಭೀರ ಘಟನೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವವರು ಪರಿಗಣಿಸಿದ್ದಾರೆ. ಅಮೆರಿಕಾದ ಕೆಂಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com