ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನಿಮ್ಮನ್ನು ಸಂಘಿಯನ್ನಾಗಿಸುವುದಿಲ್ಲ: ಲಿಬರಲ್ ಬೂಟಾಟಿಕೆ ವಿರುದ್ಧ ಅರ್ನಬ್ ಗೋಸ್ವಾಮಿ ಕಿಡಿ

ನಾನು ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತೇನೆ ಹಾಗೂ ಎಂದಿಗೂ ಭಾರತೀಯ ಸೇನೆಯ ಪರವಾಗಿ ಮಾತನಾಡುತ್ತೇನೆ, ಅದು ನನ್ನನ್ನು ಸಂಘಿಯನ್ನಾಗಿಸುತ್ತದೆಯೇ?: ಅರ್ನಬ್ ಗೋಸ್ವಾಮಿ
ಅರ್ನಬ್ ಗೋಸ್ವಾಮಿ
ಅರ್ನಬ್ ಗೋಸ್ವಾಮಿ
ಚೆನ್ನೈ: ರಾಷ್ಟ್ರಭಕ್ತಿ, ದೇಶಪ್ರೇಮದ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಲಿಬರಲ್ ಬೂಟಾಟಿಕೆಯ ವಿರುದ್ಧ ಕಿಡಿ ಕಾರಿದ್ದು, ನಾನು ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತೇನೆ ಹಾಗೂ ಎಂದಿಗೂ ಭಾರತೀಯ ಸೇನೆಯ ಪರವಾಗಿ ಮಾತನಾಡುತ್ತೇನೆ, ಅದು ನನ್ನನ್ನು ಸಂಘಿಯನ್ನಾಗಿಸುತ್ತದೆಯೇ( ಸಂಘ ಪರಿವಾರದವನನ್ನಾಗಿಸುತ್ತದೆಯೇ) ಎಂದು ಪ್ರಶ್ನಿಸಿದ್ದಾರೆ. 
ಚೆನ್ನೈ ನಲ್ಲಿ ನಡೆದ ಎಫ್ಐಸಿಸಿಐ ಎಫ್ಎಲ್ಒ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಅರ್ನಬ್ ಗೋಸ್ವಾಮಿ, ದೇಶವನ್ನು ತಲೆ ತಗ್ಗಿಸುವಂತೆ ಮಾಡುವವರ ಬಗ್ಗೆ ನಾವೇಕೆ ಸಹಿಷ್ಣುಗಳಾಗಿರಬೇಕು ಎಂದು ಪ್ರಶ್ನಿಸಿದ್ದಾರೆ. 
2016 ರ ಸೆಪ್ಟೆಂಬರ್ 18 ರಂದು ಉರಿ ಸೆಕ್ಟರ್ ನಲ್ಲಿ ದಾಳಿ ನಡೆದು 19 ಯೋಧರು ಹುತಾತ್ಮರಾದಾಗ ಏಕೆ ಯಾರೂ ಪ್ರತಿಭಟನೆ ಮಾಡಲಿಲ್ಲ? ಆಗ ಏಕೆ ಕ್ಯಾಂಡಲ್ ಲೈಟ್ ಮೆರವಣಿಗೆಗಳು ನಡೆಯಲಿಲ್ಲ? ಜೆಎನ್ ಯು ಆಗೇಕೆ ಮೌನವಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಉರಿ ಸೆಕ್ಟರ್ ದಾಳಿ ನಡೆದಾಗ ಕನ್ಹಯ್ಯ ಕುಮಾರ್ ನಾಪತ್ತೆಯಾಗಿದ್ದರು. ದೇಶಕ್ಕೆ ದಾರಿ ದೀಪ ಎಂಬಂತೆ ವರ್ತಿಸುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವ ಬೂಟಾಟಿಕೆ ಇದು ಎಂದು ಅರ್ನಬ್ ಗೋಸ್ವಾಮಿ ಹೇಳಿದ್ದಾರೆ. 
ರಾಷ್ಟ್ರಗೀತೆಗೆ ಎದ್ದು ನಿಲ್ಲುವುದಿಲ್ಲ ಎಂಬ ಹೇಳಿಕೆ ನೀಡುವುದು ಫ್ಯಾಷನ್ ಆಗಿದೆ. ರಾಷ್ಟ್ರಗೀತೆಯನ್ನು ಸಂಭ್ರಮಿಸುವುದಕ್ಕಿಂತ ಉಗ್ರ ಯಾಕೂಬ್ ಮೆಮನ್ ನ್ನು ಬೆಂಬಲಿಸುವುದು ಸಹಿಷ್ಣುತೆಯ ವ್ಯಾಖ್ಯಾನವೇ ಒಂದು ವೇಳೆ ಅದೇ ಸಹಿಷ್ಣುತೆ ಎಂದಾದರೆ, ಪಾಕಿಸ್ತಾನ ನಮ್ಮ ಯೋಧರನ್ನು ಹತ್ಯೆ ಮಾಡುವುದನ್ನು ನಿಲ್ಲಿಸುವವರೆಗೂ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಮಾತುಕತೆಯನ್ನು ನಾವು ಸಹಿಸುವುದಿಲ್ಲ ಎಂದು ಏಕೆ ಲಿಬರಲ್ ಗಳು ಹೇಳುವುದಿಲ್ಲ ಎಂದು  ಎಂದು ಅರ್ನಬ್ ಗೊಸ್ವಾಮಿ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com