

ಲಕ್ನೋ: ದಿಢೀರ್ ಬೆಳವಣಿಗೆಯೊಂದರಲ್ಲಿ ಆತ್ಯಾಚಾರ ಆರೋಪದಲ್ಲಿ ತಲೆ ಮರೆಸಿಕೊಂಡಿರುವ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಸಚಿವ ಗಾಯತ್ರಿ ಪ್ರಜಾಪತಿ ಅವರ ಗನ್ ಮ್ಯಾನ್ ಚಂದ್ರಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಪೇದೆ ಚಂದ್ರಪಾಲ್ ನನ್ನು ಜಾನಕಿಪುರಂ ನಲ್ಲಿ ಪೊಲೀರು ಸೋಮವಾರ ಬಂಧಿಸಿದ್ದಾರೆ. ಚಂದ್ರಪಾಲ್ , ಸಚಿವ ಗಾಯತ್ರಿ ಪ್ರಜಾಪತಿ ಸೇರಿದಂತೆ ನಾಲ್ವರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಸಚಿವ ಪ್ರಜಾಪತಿ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಪ್ರಜಾಪತಿ ಅವರ ಪಾಸ್ ಪೋರ್ಟ್ ಪತ್ತೆಯಾಗದ ಕಾರಣ ಕಳೆದ ಎರಡು ದಿನಗಳ ಹಿಂದೆ ಲುಕ್ ಔಟ್ ನೊಟೀಸಾ ಜಾರಿ ಮಾಡಲಾಗಿದೆ.