ಜಗತ್ತಿನ ಟಾಪ್ 10 ವಿವಿಗಳಲ್ಲಿ ಬೆಂಗಳೂರಿನ ಐಐಎಸ್‌ಸಿಗೆ 8ನೇ ಸ್ಥಾನ!

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಇದರೊಂದಿಗೆ ದೇಶದ ವಿವಿಯೊಂದು ಟಾಪ್ 10 ಪಟ್ಟಿಯಲ್ಲಿ...
ಭಾರತೀಯ ವಿಜ್ಞಾನ ವಿದ್ಯಾಸಂಸ್ಥೆ ಬೆಂಗಳೂರು
ಭಾರತೀಯ ವಿಜ್ಞಾನ ವಿದ್ಯಾಸಂಸ್ಥೆ ಬೆಂಗಳೂರು
ನವದೆಹಲಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಇದರೊಂದಿಗೆ ದೇಶದ ವಿವಿಯೊಂದು ಟಾಪ್ 10 ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದೆ ಖ್ಯಾತಿ ಗಳಿಸಿದೆ. 
ಜಾಗತಿಕ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಟೈಮ್ಸ್ ಹೈಯರ್ ಎಜುಕೇಶನ್ ಬಿಡುಗಡೆ ಮಾಡಿದ್ದು ಇದರಲ್ಲಿ ಬೆಂಗಳೂರು ವಿಜ್ಞಾನ ಸಂಸ್ಥೆ 8ನೇ ಸ್ಥಾನ ಪಡೆದಿದೆ. ಇನ್ನು ಐಐಎಸ್ಸಿ ಸಂಸ್ಥೆ ಹೊರತು ಪಡಿಸಿ ದೇಶದ ಯಾವುದೇ ಶಿಕ್ಷಣ ಸಂಸ್ಥೆ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ. 
ಅಮೆರಿಕಾದ ಕ್ಯಾಲಿಫೋರ್ನಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನದಲ್ಲಿದೆ. ಇನ್ನು ಫ್ರಾನ್ಸ್ ನ ಎಕೋಲ್ ನಾರ್ಮಲೆ ಎರಡನೇ ಸ್ಥಾನದಲ್ಲಿದ್ದು ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿದೆ. 
ಕಳೆದ ವರ್ಷ ದೇಶದ 2 ವಿದ್ಯಾ ಸಂಸ್ಥೆಗಳು ಟಾಪ್ 20ಯಲ್ಲಿ ಸ್ಥಾನ ಪಡೆದಿತ್ತು ಆದರೆ ಇದೇ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದು ಖ್ಯಾತಿ ಬೆಂಗಳೂರಿಗೆ ಸಲ್ಲುತ್ತದೆ. 1909ರಲ್ಲಿ ಜೆಮ್ ಶೆಡ್ ಟಾಟಾ ಹಾಗೂ ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಬೆಂಗಳೂರಿನಲ್ಲಿ ಐಐಎಸ್ಸಿ ಸ್ಥಾಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com