ಜಮ್ಮು-ಕಾಶ್ಮೀರದ ಹಲವೆಡೆ ಹಿಮಪಾತ: ರಾಷ್ಟ್ರೀಯ ಹೆದ್ದಾರಿ ಬಂದ್

ಜವಾಹರ್ ಸುರಂಗ ಮಾರ್ಗದ ಸುತ್ತಮುತ್ತ ಹಾಗೂ ಜಮ್ಮು ಮತ್ತು ಕಾಶ್ಮೀರದ ಹಲವುವ ಭಾಗಗಳಿ ಭಾರೀ ಹಿಮ ಬೀಳುತ್ತಿರುವ ಹಿನ್ನಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರೆಯನ್ನು ಬುಧವಾರ ಬಂದ್ ಮಾಡಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಜವಾಹರ್ ಸುರಂಗ ಮಾರ್ಗದ ಸುತ್ತಮುತ್ತ ಹಾಗೂ ಜಮ್ಮು ಮತ್ತು ಕಾಶ್ಮೀರದ ಹಲವುವ ಭಾಗಗಳಿ ಭಾರೀ ಹಿಮ ಬೀಳುತ್ತಿರುವ ಹಿನ್ನಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರೆಯನ್ನು ಬುಧವಾರ ಬಂದ್ ಮಾಡಲಾಗಿದೆ. 
ತೀವ್ರ ಹಿಮಪಾತವಾಗುತ್ತಿರುವ ಹಿನ್ನಲೆಯಲ್ಲಿ ರಂಬನ್ ಮತ್ತು ರಮ್ಸು ನಡುವಿನ ರಸ್ತೆ ಸಂಪರ್ಕ ಬಂದ್ ಆಗಿದೆ. 
ದಕ್ಷಿಣ ಕಾಶ್ಮೀರದ ಶೋಫಿಯನ್ ಜಿಲ್ಲೆಯ ಐತಿಹಾಸಿಕ ಮುಘಲ್ ರಸ್ತೆ, ಜಮ್ಮುವಿನ ರಜೌರಿ ಮತ್ತು ಪೂಂಚ್, ಶಿಮ್ಲಾದ ಸುತ್ತಮುತ್ತಲಿನ ಪ್ರದೇಶ ಕುಫ್ರಿ, ನರ್ಕಂಡ ಮತ್ತು ಖರ್ ಪತ್ಥರ್ ನಲ್ಲೂ ತೀವ್ರ ಹಿಮಪಾತವಾಗುತ್ತಿದೆ. ತಾಪಮಾನ ಕನಿಷ್ಟಕ್ಕೆ ಕುಸಿಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಸುತ್ತಮುತ್ತಲಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಮತ್ತಷ್ಟು ಹಿಮಪಾತವಾಗುವ ಸಾಧ್ಯತೆಗಳಿವೆ. ಈ ಹಿಮಪಾತ ಮಾರ್ಚ್ 13ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com