ಭಾರತೀಯ ಮೀನುಗಾರನ ಹತ್ಯೆ ಪ್ರಕರಣ: ಶ್ರೀಲಂಕಾ ಅಧ್ಯಕ್ಷರೊಂದಿಗೆ ಅನ್ಸಾರಿ ಚರ್ಚೆ

ಭಾರತೀಯ ಮೀನುಗಾರನೊಬ್ಬನನ್ನು ಶ್ರೀಲಂಕಾ ನೌಕಾಪಡೆ ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪರಾಷ್ಟ್ರಪತಿ ಹಮಿದ್ ಅನ್ಸಾರಿಯವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆಂದು ಬುಧವಾರ...
ಉಪರಾಷ್ಟ್ರಪತಿ ಹಮಿದ್ ಅನ್ಸಾರಿ
ಉಪರಾಷ್ಟ್ರಪತಿ ಹಮಿದ್ ಅನ್ಸಾರಿ
ಜಕಾರ್ತ: ಭಾರತೀಯ ಮೀನುಗಾರನೊಬ್ಬನನ್ನು ಶ್ರೀಲಂಕಾ ನೌಕಾಪಡೆ ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪರಾಷ್ಟ್ರಪತಿ ಹಮಿದ್ ಅನ್ಸಾರಿಯವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆಂದು ಬುಧವಾರ ತಿಳಿದುಬಂದಿದೆ. 
ಜಕಾರ್ತದಿಂದ ಭಾರತಕ್ಕೆ ಹಿಂದಿರುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮೀನುಗಾರನ ಹತ್ಯೆ ಕುರಿತಂತೆ ಇಂದು ಬೆಳಿಗ್ಗೆಯಷ್ಟೇ ನನಗೆ ಸುದ್ದಿ ತಿಳಿದಿತ್ತು. ಹತ್ಯೆ ಸಂಬಂಧ ಶ್ರೀಲಂಕಾ ನೌಕಾಪಡೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದಾಗ, ಅಂತಹ ಯಾವುದೇ ಘಟನೆಗಳು ನಮ್ಮ ಕಡೆಯಿಂದ ನಡೆದಿಲ್ಲ ಎಂದು ಹೇಳಿದರು. ನಂತರ ಶ್ರೀಲಂಕಾ ಅಧ್ಯಕ್ಷರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದೆ. ಈ ವೇಳೆ ಸಿರಿಸೇನಾ ಅವರು ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸುವುದಾಗಿ ಹೇಳಿದ್ದಾರೆಂದು ಹೇಳಿದ್ದಾರೆ. 
ಎರಡು ರಾಷ್ಟ್ರಗಳ ವಿಶ್ವಾಸಾರ್ಹತೆ ವೃದ್ಧಿಯಲ್ಲಿ ಮೀನುಗಾರರು ಕೂಡ ಭಾಗವಾಗಿದ್ದು, ಪದೇ ಪದೇ ಎದುರಾಗುತ್ತಿರುವ ಈ ಸಮಸ್ಯೆಗೆ ಏನಾದರೂ ಮಾಡಬೇಕೆಂದು ಮಾತುಕತೆ ವೇಳೆ ಅನ್ಸಾರಿಯವರು ಸಿರಿಸೇನಾ ಅವರಿಗೆ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. 
ಪಾಕಿಸ್ತಾನದ ಜನಸಂಧಿ ಸಮೀಪ ಭಾರತೀಯ ಮೀನುಗಾರರು ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆ ಮೀನುಗಾರರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಓರ್ವ ಮೀನುಗಾರ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಶ್ರೀಲಂಕಾ ನೌಕಾಪಡೆಯ ಈ ದೌರ್ಜನ್ಯಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com