ಕೋಮುವಾದಿಗಳನ್ನು ದೂರವಿಡಲು ಜಾತ್ಯಾತೀತ ಶಕ್ತಿಗಳು ಒಂದಾಗಬೇಕು: 'ಅತ್ತೆ' ಮಾಯಾವತಿಗೆ ಅಖಿಲೇಶ್

ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗುತ್ತಿದ್ದಂತೆಯೇ ಸಿಎಂ ಅಖಿಲೇಶ್ ಯಾದವ್ ಬಿಎಸ್ ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ.
ಮಾಯಾವತಿ-ಅಖಿಲೇಶ್ ಯಾದವ್
ಮಾಯಾವತಿ-ಅಖಿಲೇಶ್ ಯಾದವ್
ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗುತ್ತಿದ್ದಂತೆಯೇ ಸಿಎಂ ಅಖಿಲೇಶ್ ಯಾದವ್ ಬಿಎಸ್ ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ. 
ಕಳಪೆ ಸಾಧನೆ ಸಾಧ್ಯತೆಯ ಹೊರತಾಗಿಯೂ ಎಸ್ ಪಿಯೊಂದಿಗಿನ ಮೈತ್ರಿಯ ಸಾಧ್ಯತೆಯನ್ನು ತಿರಸ್ಕರಿಸಿರುವ ಮಾಯಾವತಿ ನೇತೃತ್ವದ ಬಿಎಸ್ ಪಿಯ ಮನವೊಲಿಕೆ ಮಾಡಲು ಯತ್ನಿಸುತ್ತಿರುವ ಅಖಿಲೇಶ್ ಯಾದವ್ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಶಕ್ತಿಗಳು ಒಂದಾಹಬೇಕು, ಕೋಮುವಾದಿಗಳನ್ನು ತಡೆಗಟ್ಟುವುದು ಜಾತ್ಯಾತೀತ ಶಕ್ತಿಗಳ ಕರ್ತವ್ಯ, ಜವಾಬ್ದಾರಿ ಎಂದು ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. 
ದೇಶದ ಎಲ್ಲಾ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕಿದೆ ಎಂದಿರುವ ಅಖಿಲೇಶ್ ಯಾದವ್ ನೇರವಾಗಿ ಬಿಎಸ್ ಪಿ, ಮಾಯಾವತಿ ಹೆಸರನ್ನು ಪ್ರಸ್ತಾಪಿಸದೇ ಇದ್ದರೂ ಜಾತ್ಯಾತೀತ ಒಗ್ಗಟ್ಟಿನ ಮಂತ್ರ ಬಿಎಸ್ ಪಿಯೊಂದಿಗಿನ ಮೈತ್ರಿಗೆ ತೋರುತ್ತಿರುವ ಒಲವಿನ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ. 5 ರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದ್ದು  ಮಾ.9 ರಂದು ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎಸ್ ಪಿ ಯೊಂದಿಗೆ ಮೈತ್ರಿಗೆ ಯತ್ನಿಸುತ್ತಿರುವ ಅಖಿಲೇಶ್ ಯಾದವ್ ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂಬ ಹೇಳಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com