ಚೆನ್ನೈ: ವೇತನ ಸಹಿತ 26 ವಾರಗಳ ಮಾತೃತ್ವ ರಜೆಗೆ ಲೋಕಸಭೆಯಲ್ಲಿ ಅನುಮೋದನೆ ನೀಡಿರುವುದು ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೋದ್ಯಮಗಳಲ್ಲಿ ಹೆಚ್ಚು ಮಂದಿ ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುವ ವಾತಾವರಣವನ್ನು ಸೃಷ್ಟಿಸಬಹುದು.
ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳು 6 ತಿಂಗಳು ವೇತನ ಸಹಿತ ರಜೆ ನೀಡಲು ಸಾಧ್ಯವಾಗುವುದಿಲ್ಲ. ದೀರ್ಘಾವಧಿಯಲ್ಲಿ ಇದು ಮಹಿಳಾ ಸಿಬ್ಬಂದಿ ನೇಮಕಾತಿಯನ್ನು ಕೆಲಸದ ಸ್ಥಳಗಳಲ್ಲಿ ಕಡಿಮೆ ಮಾಡಬಹುದು ಎಂದು ಆಸೆಂಟ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯಮ್ ಹೇಳುತ್ತಾರೆ.
2016ರ ಅಸ್ಸೋಚಮ್-ಥಾಟ್ ಅರ್ಬಿಟ್ರೇಟ್ ಸಂಶೋಧನೆ ಪ್ರಕಾರ, ಕೆಲಸದ ಸ್ಥಳಗಳಲ್ಲಿ ಕಳೆದೊಂದು ದಶಕದಿಂದ ಮಹಿಳೆಯರ ಸಂಖ್ಯೆ ಶೇಕಡಾ 10ರಷ್ಟು ಕಡಿಮೆಯಾಗಿದೆ. ಆದರೆ ಲೋಕಸಭೆಯಲ್ಲಿ ಹೊರಡಿಸಿರುವ ಈ ವಿಧೇಯಕಕ್ಕೆ ಮಹಿಳಾ ವೃಂದದಿಂದ ಸಂತೋಷ ವ್ಯಕ್ತವಾಗಿದೆ.