ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಿಂದ ಈ ಫಲಿತಾಂಶ ದೊರೆತಿದ್ದು, ಉತ್ತರ ಪ್ರದೇಶ ಮಾದರಿಯ ಫಲಿತಾಂಶವೂ ರಾಜ್ಯದಲ್ಲಿ ಬರಲಿದ್ದು, ದೇಶಾದ್ಯಂತ ಬಿಜೆಪಿ, ಮೋದಿ ಪರ ಅಲೆ ಎದ್ದಿದೆ ಎಂದು ಯಡ್ಯೂರಪ್ಪ ಹೇಳಿದ್ದಾರೆ. ಹಗುರವಾಗಿ ಮಾತನಾಡುತ್ತಿದ್ದವರಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಕೀರ್ತಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು, ಚುನಾವಣೆಯ ಫಲಿತಾಂಶ ಮುಂಬರುವ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯ ಮೇಲೂ ಪರಿಣಾಮ ಬೀರಲಿದ್ದು, ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಯಡ್ಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.