ಭಾರತೀಯರ ಹತ್ಯೆ: ಅಮೆರಿಕಾದಲ್ಲಿ ವರ್ಣಭೇದ ನೀತಿಯಿಂದ ಭಾರತೀಯ ಕುಟುಂಬದವರಲ್ಲಿ ಆತಂಕ

ಅಮೆರಿಕಾದಲ್ಲಿ ಜನಾಂಗೀಯ ನಿಂದನೆ ಮತ್ತು ಹತ್ಯೆ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಮೆರಿಕಾದಲ್ಲಿ ಜನಾಂಗೀಯ ನಿಂದನೆ ಮತ್ತು ಹತ್ಯೆ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಕಂಪೆನಿಗಳು ಮತ್ತು ನೌಕರರ ಕುಟುಂಬಿಕರು ತೀವ್ರ ಆತಂಕಕ್ಕೀಡಾಗಿದ್ದು, ಕಂಪೆನಿಗಳ ಸಲಹೆಗಾರರು ಭಾರತೀಯರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. 

ಅಮೆರಿಕಾದಲ್ಲಿ ವರ್ಣಭೇದ ನೀತಿ ಪ್ರಚಲಿತದಲ್ಲಿದ್ದು ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಇನ್ನಷ್ಟು ಬಿಗಡಾಯಿಸಿದೆ ಎಂದು ಅಮೆರಿಕಾದಲ್ಲಿ ಕೆಲಸ ಮಾಡುವ ಅನೇಕ ಭಾರತೀಯರು ಹೇಳುತ್ತಾರೆ. ಇತ್ತೀಚೆಗೆ ಭಾರತೀಯ ಮೂಲದ ಇಬ್ಬರು ನೌಕರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಅಮೆರಿಕಾದಲ್ಲಿರುವ ಉದ್ಯೋಗಸ್ಥರ ಪೋಷಕರು ಮತ್ತು ಬಂಧುಗಳು ಆತಂಕಕ್ಕೊಳಗಾಗಿದ್ದಾರೆ.

ಭಾರತೀಯರಿಂದಲೂ ವರ್ಣಭೇದ ನೀತಿ: ಸುಮಂತ್ ಜೈನ್(ಹೆಸರು ಬದಲಾಯಿಸಲಾಗಿದೆ) ಅಮೆರಿಕಾದ ಹಾರ್ಟ್ ಫೊರ್ಡ್ ನಲ್ಲಿ ಪ್ರಮುಖ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕಾ ವಲಸಿಗರ ದೇಶ, ನಾವು ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಬದುಕಬೇಕು. ಅಮೆರಿಕಾದ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಉತ್ತರ ಭಾಗದಲ್ಲಿ ಜನಾಂಗೀಯ ದ್ವೇಷ, ನಿಂದನೆ ಕಡಿಮೆ ಎನ್ನುತ್ತಾರೆ.

ಭಾರತೀಯ ಮೂಲದವರು ಮತ್ತು ಅಮೆರಿಕಾದಲ್ಲಿ ಕೆಲ ವರ್ಷಗಳಿಂದ ನೆಲೆಸಿರುವವರು ಕೂಡ ವರ್ಣಬೇಧ ತಾರತಮ್ಯ ತೋರಿಸುತ್ತಿರುವುದು ಆಘಾತವನ್ನುಂಟುಮಾಡಿದೆ. ಅಮೆರಿಕಾದಲ್ಲಿ ಗ್ರೀನ್ ಕಾರ್ಡು ಹೊಂದಿರುವವ ಭಾರತೀಯರೇ ನಮ್ಮನ್ನು ಭಾರತೀಯರು ಎಂದು ಕರೆಯುವುದು ದುರಂತ ಎನ್ನುತ್ತಾರೆ ಸುಮಂತ್ ಜೈನ್.

ಮಿಚಿಗನ್ ನಲ್ಲಿ ಕೆಲಸ ಮಾಡುತ್ತಿರುವ ಕೃಷ್ಣಾ ನಾಯಕ್, ದೇಶವನ್ನು ಯಾರು ಆಳುತ್ತಾರೆ ಎನ್ನುವುದು ಮುಖ್ಯವಲ್ಲ. ಡೊನಾಲ್ಡ್ ಟ್ರಂಪ್ ಆಗಿರಲಿ, ಒಬಾಮಾ ಆಗಿರಲಿ ನಾನಿಲ್ಲಿಗೆ ಬಂದಲ್ಲಿಂದ ಭಾರತೀಯರು ಕಿರುಕುಳಕ್ಕೆ ಒಳಗಾಗುವುದನ್ನು ನೋಡಿದ್ದೇನೆ. ನಾನಿಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಅವರು.

ಅನಿಶ್ಚಿತತೆ ಮುಂದುವರಿಕೆ: ಅಮೆರಿಕಾದಲ್ಲಿ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನೇಕ ಹೊಸ ಯೋಜನೆಗಳ ನಿರ್ಧಾರದಿಂದಾಗಿ ಅನಿಶ್ಚಿತತೆ ಮುಂದುವರಿದಿದೆ. ಬೆಂಗಳೂರಿನಿಂದ ಅಮೆರಿಕಕ್ಕೆ ಉದ್ಯೋಗ, ಶಿಕ್ಷಣಕ್ಕೆಂದು ಹೋದ ಅನೇಕರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಆತಂಕ ನೆಲೆಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com