ಪಂಜಾಬ್ ನಲ್ಲಿ ಶಕ್ತಿ ಪ್ರದರ್ಶನ ಮಾಡಿದ ಮತದಾರ; 10 ಸಚಿವರಿಗೇ ಸೋಲು!

ಆಡಳಿತ ವಿರೋಧಿ ಅಲೆ ಪಂಜಾಬ್ ನಲ್ಲಿ ಬಿಜೆಪಿ ಮುಳುವಾಗಿ ಪರಿಣಮಿಸಿದ್ದು, 10 ಸಚಿವರಿಗೇ ಸೋಲಿನ ರುಚಿ ತೋರಿಸುವ ಮೂಲಕ ಮತದಾರ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಘಡ: ಆಡಳಿತ ವಿರೋಧಿ ಅಲೆ ಪಂಜಾಬ್ ನಲ್ಲಿ ಬಿಜೆಪಿ ಮುಳುವಾಗಿ ಪರಿಣಮಿಸಿದ್ದು, 10 ಸಚಿವರಿಗೇ ಸೋಲಿನ ರುಚಿ ತೋರಿಸುವ ಮೂಲಕ ಮತದಾರ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾನೆ.

ನಿನ್ನೆ ಪ್ರಕಟಗೊಂಡ ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದ್ದು, ಸಿಎಂ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಎಸ್ ಎಡಿ-ಬಿಜೆಪಿ ಮೈತ್ರಿಕೂಟ ಸರ್ಕಾರ ಆಡಳಿತ ವಿರೋಧಿ ಅಲೆಯಲ್ಲಿ  ಕೊಚ್ಚಿಹೋಗಿದೆ. ಒಟ್ಟು 117 ಸ್ಥಾನಗಳ ಪೈಕಿ ಆಡಳಿತಾ ರೂಢ ಅಕಾಲಿದಳ ಬಿಜೆಪಿ ಮೈತ್ರಿಕೂಟ ಗಳಿಸಿದ್ದು ಕೇವಲ 18 ಸ್ಥಾನ ಮಾತ್ರ. ಇನ್ನು ಪ್ರಮುಖ ವಿಚಾರವೆಂದರೆ ಪಂಜಾಬ್ ಬರೊಬ್ಬರಿ 10 ಸಚಿವರು ತಮ್ಮ ಕ್ಷೇತ್ರವನ್ನೂ ಕೂಡ  ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಸೋಲು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಸಚಿವರಾದ ಆದರ್ಶ್ ಪ್ರತಾಪ್ ಸಿಂಗ್ ಕೈರೋನ್, ಸುರ್ಜಿತ್ ಕುಮಾರ್ ಜ್ಯಾನಿ, ಅನಿಲ್ ಜೋಷಿ, ಗುಲ್ಜರ್ ಸಿಂಗ್ ರಾಣಿಕೆ, ಸೋಹನ್ ಸಿಂಗ್ ಥಂಡಲ್, ಜನ್ಮೇಜಾ ಸಿಖೋನ್, ಟೊಟಾ ಸಿಂಗ್, ಸಿಖಂದರ್ ಸಿಂಗ್ ಮಲುಕಾ, ಸುರ್ಜಿತ್  ಸಿಂಗ್ ರಾಖ್ರಾ ಮತ್ತು ದಲ್ಜಿತ್ ಸಿಂಗ್ ಚೀಮಾ ಅವರು ಸೋಲುಕಂಡಿದ್ದು, ಮತದಾರ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com