ಅಜಂ ಖಾನ್ ಅವರು ಇಂದು ಶಾಸಕರಾಗಿ ಗೆಲುವು ಸಾಧಿಸಿದ ಪ್ರಮಾಣ ಪತ್ರ ಪಡೆಯಲು ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ತೆರಳಿದ್ದರು. ಈ ವೇಳೆ ರಾಂಪುರ ಮಂಡಿ ಪ್ರವೇಶಿಸುತ್ತಿದ್ದ ಅವರ ಕಾರನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಅಜಂ ಖಾನ್, ನಾನು ಇನ್ನೂ ಜನಪ್ರತಿನಿಧಿ, ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.