ಪಂಜಾಬ್ ನ ಗಾಯಕಿ ನಾಹಿದ್ ಆಫ್ರಿನ್ ವಿರುದ್ಧ ಫತ್ವಾ: ಬಾಲಿವುಡ್ ದಿಗ್ಗಜರ ಮೌನ ಪ್ರಶ್ನಿಸಿದ ಶಿವಸೇನೆ

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡದಂತೆ ಅಸ್ಸಾಂ ಮೂಲದ ಗಾಯಕಿ ನಾಹಿದ್ ಅಫ್ರಿನ್ ಗೆ ಹಲವು ಮುಸಲ್ಮಾನ...
ನಾಹಿದ್ ಅಫ್ರಿನ್
ನಾಹಿದ್ ಅಫ್ರಿನ್
ಮುಂಬೈ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡದಂತೆ ಅಸ್ಸಾಂ ಮೂಲದ ಗಾಯಕಿ ನಾಹಿದ್ ಅಫ್ರಿನ್ ಗೆ ಹಲವು ಮುಸಲ್ಮಾನ ಪಾದ್ರಿಗಳು ಫತ್ವಾ ಹೊರಡಿಸಿರುವ ಕ್ರಮವನ್ನು ಖಂಡಿಸಿರುವ ಶಿವಸೇನೆ ಇಂದು ಬಾಲಿವುಡ್ ಕಲಾವಿದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಈ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದೆ.
ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕತ್ವದಲ್ಲಿ ಅದು 16 ವರ್ಷದ ಪಂಜಾಬ್ ನ ಗಾಯಕಿಗೆ ಬಾಲಿವುಡ್ ನಟ, ನಟಿಯರು ಏಕೆ ಬೆಂಬಲ ಸೂಚಿಸದಿರುವುದರ ವಿರುದ್ಧ ಖಂಡಿಸಿದೆ.
ಶಿವಸೇನೆ ಮತ್ತು ಇತರ ರಾಷ್ಟ್ರೀಯವಾದಿ ಸಂಘಟನೆಗಳು ಆಫ್ರಿನ್ ಗೆ ಬೆಂಬಲ ಸೂಚಿಸಿದೆ. ಇತರ ಸಂದರ್ಭಗಳಲ್ಲಿ ಅಭಿವ್ಯಕ್ತಿ ಮತ್ತು ಅಸಹಿಷ್ಣುತೆ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಈಗ ಏಕೆ ಮೌನ ವಹಿಸಿದ್ದಾರೆ ಎಂದು ಆಶ್ಚರ್ಯವಾಗುತ್ತದೆ ಎಂದು ಶಿವಸೇನೆ ಹೇಳಿದೆ. ಅದು ಪಟ್ಟಿ ಮಾಡಿದವರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ಮುಂದಿನ ಸಾಲಿನಲ್ಲಿದೆ. ಈ 16 ವರ್ಷದ ಬಾಲಕಿಗೆ ಆಗುವ ಅನ್ಯಾಯದ ವಿರುದ್ಧ ಏಕೆ ಧ್ವನಿಯೆತ್ತಿಲ್ಲ ಎಂದು ಶಿವಸೇನೆ ಸಾಮ್ನಾದಲ್ಲಿ ಪ್ರಶ್ನಿಸಿದೆ.
ಪದ್ಮಾವತಿ ಚಿತ್ರಕ್ಕೆ ಸಂಬಂಧಪಟ್ಟಂತೆ ವಿವಾದವೆದ್ದಾಗ ಚಿತ್ರೋದ್ಯಮದವರು ಸಂಸತ್ತಿನಲ್ಲಿ ಕೂಡ ಸಂಜಯ್ ಲೀಲಾ ಬನ್ಸಾಲಿ ಪರ ಧ್ವನಿಯೆತ್ತಿದವರು ಆಫ್ರಿನ್ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ಅದು ಕೇಳಿದೆ.
ಪಾಕಿಸ್ತಾನದ ಕಲಾವಿದು ಭಾರತದಲ್ಲಿ ಕೆಲಸ ಮಾಡುವುದಕ್ಕೆ ನಾವು ನಿಷೇಧ ಹೇರಿರುವುದು ಭಯೋತ್ಪಾದನೆಯನ್ನು ತಡೆಗಟ್ಟಲು. ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಮುಸಲ್ಮಾನ ಪಾದ್ರಿಗಳು ಆಫ್ರಿನ್ ವಿರುದ್ಧ ಹೊರಡಿಸಿರುವ ಫತ್ವಾವನ್ನು ವಿರೋಧಿಸಲಿಲ್ಲ ಏಕೆ ಎಂದು ಕೇಳಿದರು. ಮಹೇಶ್ ಭಟ್, ಜಯಾ ಬಚ್ಚನ್ ಮೊದಲಾದವರು ಆ ಬಾಲಕಿಯ ಧೈರ್ಯವನ್ನು ಮೆಚ್ಚಬೇಕಾಗಿತ್ತು. 
ಶಿವಸೇನೆ ಸಂಪೂರ್ಣವಾಗಿ ಆಫ್ರಿನ್ ನ್ನು ಬೆಂಬಲಿಸುತ್ತದೆ ಎಂದು ತಿಳಿಸಿದೆ. 
ಫತ್ವಾ ಹೊರಡಿಸಿಲ್ಲ: ಆದರೆ ಫತ್ವಾ ಬಗ್ಗೆ ನನಗೆ ಗೊತ್ತಿರಲಿಲ್ಲ. ಮಾಧ್ಯಮಗಳಿಂದಷ್ಟೇ ಗೊತ್ತಾಯಿತು. ಎಂದು ಸ್ಕ್ರಾಲ್ ಡಾಟ್ ಇನ್ ಜತೆ ಮಾತನಾಡಿದ ಆಫ್ರೀನ್ ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆಫ್ರೀನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಜಾಮಿಯತ್ ಉಲಮಾ  ಕಾರ್ಯದರ್ಶಿ ಮೌಲವಿ ಫಜುಲುಲ್  ಕರೀಂ ಖಾಸಿಮಿ, ಗಾಯಕಿ ವಿರುದ್ಧ ಫತ್ವಾ ಹೊರಡಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com