ಮುಸ್ಲಿಂ ಮೌಲ್ವಿಗಳ ನಾಪತ್ತೆ ಪ್ರಕರಣ: ಪಾಕ್ ಜೊತೆ ಮಾತುಕತೆ ನಡೆಸುತ್ತೇವೆಂದ ಸುಷ್ಮಾ

ಪಾಕಿಸ್ತಾನದಲ್ಲಿ ಭಾರತದ ಇಬ್ಬರು ಮುಸ್ಲಿಂ ಮೌಲ್ವಿಗಳು ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುತ್ತೇವೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಪಾಕಿಸ್ತಾನದಲ್ಲಿ ಭಾರತದ ಇಬ್ಬರು ಮುಸ್ಲಿಂ ಮೌಲ್ವಿಗಳು ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುತ್ತೇವೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಹೇಳಿದ್ದಾರೆ. 
ಮುಸ್ಲಿಂ ಮೌಲ್ವಿಗಳು ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಸಂಬಂಧ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಇಬ್ಬರು ಭಾರತೀಯರ ಕುರಿತ ಮಾಹಿತಿ ಹಾಗೂ ವರದಿಗಳನ್ನು ನವದೆಹಲಿಗೆ ನೀಡುವಂತೆ ಪಾಕಿಸ್ತಾನದ ಬಳಿ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ. 
ಲಾಹೋರ್ ನಲ್ಲಿರುವ ಪ್ರಸಿದ್ಧ ದಾತ ದರ್ಬಾರ್ ದರ್ಗಾಕ್ಕೆ ಭೇಟಿನೀಡುವ ಸಲುವಾಗಿ ದೆಹಲಿಯ ಹಝ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಸೂಫಿ ಧರ್ಮಗುರುಗಳು ಪಾಕಿಸ್ತಾನಕ್ಕೆ ಹೋಗಿದ್ದರು. ದರ್ಗಾದ ಮುಖ್ಯ ಧರ್ಮಗುರು ಆಸೀಫ್ ನಿಜಾಮಿ ಮತ್ತು ನಝೀಮ್ ನಿಜಾಮಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. 
ಬುಧವಾರ ಲಾಹೋರ್ ನಿಂದ ಕರಾಚಿಗೆ ಇಬ್ಬರು ಧರ್ಮಗುರುಗಳು ವಿಮಾನ ಹಿಡಿಯಬೇಕಾಗಿತ್ತು. ಆಸೀಫ್ ಗೆ ಕರಾಚಿಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ, ಪ್ರಯಾಣ ದಾಖಲೆಯಲ್ಲಿನ ತಪ್ಪುಗಳಿಂದಾಗಿ ನಝೀಮ್ ಅವರನ್ನು ಲಾಹೋರ್ ನಲ್ಲಿಯೇ ತಡೆಯಲಾಗಿತ್ತು. ಆದರೆ, ಇದೀಗ ನಝೀಮ್ ಲಾಹೋರ್ ವಿಮಾನ ನಿಲ್ದಾಣದಿಂದ, ಆಸೀಪ್ ಕರಾಚಟಿಯಿಂದ ನಾಪತ್ತೆಯಾಗಿದ್ದಾರೆಂದು ಅವರ ಕುಟುಂಬಸ್ಥರು ಹೇಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com