ತಾಜ್'ಮಹಲ್ ಮೇಲೆ ಇಸಿಸ್ ಕೆಂಗಣ್ಣು: ದಾಳಿಗೆ ಸಂಚು

ವಿಶ್ವವಿಖ್ಯಾತ ತಾಜ್'ಮಹಲ್'ಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ದಾಳಿಯ ಭೀತಿ ಎದುರಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವವಿಖ್ಯಾತ ತಾಜ್'ಮಹಲ್'ಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ದಾಳಿಯ ಭೀತಿ ಎದುರಾಗಿದೆ. 
ತಾಜ್ ಮಹಲ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದು, ತಾಜ್'ಮಹಲ್ ಮೇಲೆ ಯಾವೆಲ್ಲಾ ರೀತಿಯಾಗಿ ದಾಳಿ ಮಾಡಬಹುದು ಎಂಬುದರ ಕುರಿತು ರಚನೆ ಮಾಡಲಾದ ಚಿತ್ರ ಇಸಿಸ್ ಪರವಾದ ವೆಬ್ ಸೈಟ್ ವೊಂದರಲ್ಲಿ ಮಾರ್ಚ್.14 ರಂದು ಪ್ರಕಟವಾಗಿದೆ. 
ಅಹ್ವಾಲ್ ಉಮ್ಮಾತ್ ಎಂಬಾತನಿಂದ ದಾಳಿ ಕುರಿತ ಚಿತ್ರ ರಚನೆಯಾಗಿದೆ ಎಂದು ತಿಳಿದುಬಂದಿದೆ. ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿರುವ ಪ್ರಕಾರ, ತಾಜ್ ಮಹಲ್ ಮುಂದೆ ದಾಳಿಗೆ ಸಿದ್ಧವಾಗಿ ನಿಂತಿರುವ ವ್ಯಕ್ತಿ ಸ್ಫೋಟಕ ತುಂಬಿದ ಹಿಂಬದಿ ಬ್ಯಾಗ್ ತೊಟ್ಟು ಬಂದೂಕು ಹಿಡಿದು ನಿಂತಿದ್ದಾನೆ. ಮತ್ತೊಂದು ಚಿತ್ರದಲ್ಲಿ ಅರೇಬಿಕ್ ಭಾಷೆಯಲ್ಲಿ 'ಆಗ್ರಾದಲ್ಲಿ ಹುತಾತ್ಮರಾಗುವ ನಿರೀಕ್ಷೆಯಲ್ಲಿದ್ದೇವೆಂಬ ಅಕ್ಷರಗಳಿದ್ದು, ಇದು ಅತ್ಮಾಹುತಿ ದಾಳಿಯ ಸೂಚನೆಗಳನ್ನು ನೀಡಿದೆ.
ಭಾರತ ಮೇಲೆ ಇಸಿಸ್ ಉಗ್ರರು ದಾಳಿ ಬೆದರಿಕೆ ಕರೆ ನೀಡುತ್ತಿರುವುದು ಇದು ಮೊದಲೇನಲ್ಲ. ಮಾರ್ಚ್.8 ರಂದು ಲಖನೌನ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಉಗ್ರ ಸೈಫುಲ್ಲಾ ಹತ್ಯೆಯ ಬಳಿಕ ಮತ್ತೋರ್ವ ಇಸಿಸ್ ಪರ ಉಗ್ರ ಭಾರತದಲ್ಲಿ ದಾಳಿ ಬೆದರಿಕೆಯ ಸಂದೇಶವನ್ನು ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ ನಲ್ಲಿ ಸೈಫುಲ್ಲಾ ಚಿತ್ರವನ್ನು ತೋರಿಸಲಾಗಿದೆ. 
ಗುಪ್ತಚರ ಇಲಾಖೆ ನೀಡಿರುವ ಪ್ರಕಾರ ಈವರೆಗೂ 75 ಭಾರತೀಯರು ಈಗಾಗಲೇ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ. ಇಸಿಸ್ ಗೆ ಸೇರ್ಪಡೆಗೊಂಡವರಲ್ಲಿ ಬಹುತೇಕರು ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಮೂಲದವರೇ ಆಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com