2022ರ ವೇಳೆಗೆ ರೈತರ ಆದಾಯ ದುಪ್ಪಟ್ಟಾಗಲಿದೆ: ರಾಜನಾಥ್ ಸಿಂಗ್

ದೇಶದ ರೈತರ ಆದಾಯ 2022ರ ವೇಳೆಗೆ ದುಪ್ಪಟ್ಟಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತ ...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಹರ್ಯಾಣ: ದೇಶದ ರೈತರ ಆದಾಯ 2022ರ ವೇಳೆಗೆ ದುಪ್ಪಟ್ಟಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್  ಸಿಂಗ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಹರ್ಯಾಣ ಸರ್ಕಾರ ಆಯೋಜಿಸಿದ್ದ ಕೃಷಿ ಸಂವಾದದಲ್ಲಿ ಮಾತನಾಡಿದ ಅವರು, ದೇಶದ ಕೃಷಿಕರು ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂಬ ಆರೋಪ ನಿರಾಕರಿಸಿರುವ ರಾಜನಾಥ್ ರೈತರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನ ಹೊಂದಿದ್ದಾರೆ. ಈ ದೃಷ್ಠಿಕೋನವನ್ನು ನಿಜ ಮಾಡಲು ನಾವು ಯೋಜನೆ ಸಿದ್ಧ ಪಡಿಸುತ್ತಿದ್ದೇವೆ ಎಂದು ಸಿಂಗ್ ವಿವರಿಸಿದ್ದಾರೆ.

ರೈತರ  ಮುಂದಿರುವ ಸವಾಲುಗಳ ಬಗ್ಗೆ ಮಾತನಾಡಿದ ಸಿಂಗ್, ರೈತರು ಬೆಳೆ ಬೆಳಯಲು ಹೆಚ್ಚಿನ ಹಣ ಹೂಡುತ್ತಾರೆ, ಆದರೆ ಅವರ ಉತ್ಪಾದನೆ ಮಾಡಿದ ಬೆಲೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ತಿಳಿಸಿದರು.

21 ನೇ ಶತಮಾನದಲ್ಲಿ ಜಗತ್ತಿನಾದ್ಯಂತ ಬಹುತೇಕ ಮಂದಿ ಕೃಷಿಯ ಮೇಲೆ ನಂಬಿಕೆ ಇರಿಸಿ, ವ್ಯವಸಾಯ ಆರಂಭಿಸಿದ್ದಾರೆ, ತಮ್ಮ ಕೃಷಿಯಲ್ಲಿ ಉತ್ತಮ ತಂತ್ರಜ್ಞಾನ ಬಳಸಿಕೊಂಡು ಮುಂದುವರಿಯುತ್ತಿದ್ದಾರೆ, ಭಾರತದಲ್ಲಿ ರೈತರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳುವ ಮೂಲಕ ರಾಜನಾಥ್ ಸಿಂಗ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com