ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ
ದೇಶ
ಕಾಶ್ಮೀರ ರಾಜಕೀಯ ವಿಚಾರವಾಗಿದ್ದು, ರಾಜಕೀಯ ಪರಿಹಾರದ ಅಗತ್ಯವಿದೆ: ಫರೂಖ್ ಅಬ್ದುಲ್ಲಾ
ಕಾಶ್ಮೀರ ವಿಚಾರ ರಾಜಕೀಯ ವಿಚಾರಕ್ಕೆ ಸಂಬಂಧಿಸಿದ್ದಾಗಿದ್ದು, ಸಮಸ್ಯೆಗೆ ರಾಜಕೀಯವಾಗಿಯೇ ಪರಿಹಾರದ ಅಗತ್ಯವಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಅವರು ಶುಕ್ರವಾರ ಅಸಂಬದ್ಧ ಹೇಳಿಕೆಯನ್ನು...
ಶ್ರೀನಗರ: ಕಾಶ್ಮೀರ ವಿಚಾರ ರಾಜಕೀಯ ವಿಚಾರಕ್ಕೆ ಸಂಬಂಧಿಸಿದ್ದಾಗಿದ್ದು, ಸಮಸ್ಯೆಗೆ ರಾಜಕೀಯವಾಗಿಯೇ ಪರಿಹಾರದ ಅಗತ್ಯವಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಅವರು ಶುಕ್ರವಾರ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕರೊಂದಿಗಿನ ಮಾತುಕತೆ ಸಂದರ್ಭದಲ್ಲಿ ಮಾತನಾಡಿರುವ ಅವರು, ಕಾಶ್ಮೀರ ರಾಜಕೀಯ ವಿಚಾರ. ಈ ವಿಚಾರವನ್ನು ಆರ್ಥಿಕ ಪ್ಯಾಕೇಜ್ ಗಳಿಂದಾಗಲೀ ಅಥವಾ ಇತರೆ ಪರಿಹಾರದಿಂದಲೀ ಪರಿಹರಿಸಲು ಸಾಧ್ಯವಿಲ್ಲ. ರಾಜಕೀಯ ಪರಿಹಾರದಿಂದಲೇ ಸಮಸ್ಯೆ ಬಗೆಹರಿಸುವ ಅಗತ್ಯವಿೆದ ಎಂದು ಹೇಳಿದ್ದಾರೆ.
1947ರಿಂದಲೂ ಕಾಶ್ಮೀರ ವಿಚಾರ ರಾಜಕೀಯ ವಿಚಾರವೆಂದೇ ನ್ಯಾಷನಲ್ ಕಾನ್ಫರೆನ್ಸ್ ಹೇಳುತ್ತಾ ಬಂದಿದೆ. ನಮ್ಮಿಂದ ಕಿತ್ತುಕೊಳ್ಳಲಾಗಿರುವ ಸ್ವಾಯತ್ತತೆಯನ್ನು ಮರುಸ್ಥಾಪನೆ ಮಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ಸುದೀರ್ಘ ಕಾದಾಟ ಹಾಗೂ ಬಲಿದಾನಗಳ ಬಳಿಕ ಸಂವಿಧಾನ ಕಲಂ 370ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ