70 ವರ್ಷದಿಂದ ಮುಸ್ಲೀಮರನ್ನು ವಂಚಿಸಿದವರಿಗೆ ಉತ್ತರ ಪ್ರದೇಶ ಚುನಾವಣೆ ತಕ್ಕ ಪಾಠ: ಓವೈಸಿ

ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲವು ಕಳೆದ 70 ವರ್ಷಗಳಿಂದ ಮುಸ್ಲಿಂರನ್ನು ವಂಚಿಸಿದ್ದವರಿಗೆ ತಕ್ಕ ಗುಣಪಾಠ ಎಂದು ಎಐಎಂಐಎಂ ವರಿಷ್ಠ ಅಸಾದುದ್ದೀನ್...
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ
Updated on: 
ಕೃಷ್ಣಗಂಜ್: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲವು ಕಳೆದ 70 ವರ್ಷಗಳಿಂದ ಮುಸ್ಲಿಂರನ್ನು ವಂಚಿಸಿದ್ದವರಿಗೆ ತಕ್ಕ ಗುಣಪಾಠ ಎಂದು ಎಐಎಂಐಎಂ ವರಿಷ್ಠ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 
ಕೃಷ್ಣಗಂಜ್ ಪ್ರವಾಸದಲ್ಲಿದ್ದ ಓವೈಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತ್ಯಾತೀತತೆ ಬಗ್ಗೆ ಉಪನ್ಯಾಸಗಳನ್ನು ಮಾಡುತ್ತಿದ್ದವರು ಉತ್ತರಖಂಡ್ ಮತ್ತು ಒಡಿಶಾ(ಸ್ಥಳೀಯ ಚುನಾವಣೆ)ದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಬರಿ ಬಾಯಿ ಮಾತಿಗೆ ಅಲ್ಪಸಂಖ್ಯಾತ ಮುಸ್ಲಿಂರ ಪರವಾಗಿ ಹೋರಾಡುತ್ತೇವೆ ಎಂದು ಹೇಳುತ್ತಿದ್ದಿರೀ ಎಂದು ಪ್ರಶ್ನಿಸಿದ್ದಾರೆ. 
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಸಂಸದ ಯೋಗಿ ಆದಿತ್ಯನಾಥ ಅವರು ಪ್ರಮಾಣವಚನ ಸ್ವೀಕರಿಸಿದ್ದು ಯಾರೇ ಉತ್ತರಪ್ರದೇಶದ ಮುಖ್ಯಮಂತ್ರಿ ಆದರೂ ಅವರು ದೇಶ ಸಂವಿಧಾನ ಮತ್ತು ಕಾನೂನಿಗೆ ಬದ್ಧರಾಗಿರಬೇಕು ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com