ಪೇಶಾವರ ದಾಳಿ ಮಾದರಿಯಲ್ಲಿ ದೆಹಲಿ ಶಾಲೆ ಮೇಲೆ ದಾಳಿಗೆ ಲಷ್ಕರ್ ಸಂಚು?

ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿ ಮಾದರಿಯಲ್ಲೇ ಭಾರತದ ರಾಜಧಾನಿ ದೆಹಲಿಯಲ್ಲೂ ದಾಳಿ ನಡೆಸಲು ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತಯ್ಬಾ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿ ಮಾದರಿಯಲ್ಲೇ ಭಾರತದ ರಾಜಧಾನಿ ದೆಹಲಿಯಲ್ಲೂ ದಾಳಿ ನಡೆಸಲು ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಇ  ತಯ್ಬಾ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ ಲಷ್ಕರ್ ಸಂಘಟನೆಯ ಓರ್ವ ಉಗ್ರನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ಈ ನಡುವೆಯೇ ಗುಪ್ತಚರ ದಳಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಭಾರತದಲ್ಲಿ ಮತ್ತೆ ಕಾರ್ಯ ಪ್ರವೃತ್ತರಾಗಿರುವ ಲಷ್ಕರ್ ಉಗ್ರ ಸಂಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದ್ದ ಸೈನಿಕ ಶಾಲೆ ಮೇಲಿನ ದಾಳಿ ಮಾದರಿಯಲ್ಲೇ ದೆಹಲಿಯಲ್ಲೂ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ತಿಳಿದುಬಂದಿದೆ. ಗುಪ್ತಚರ ಮೂಲಗಳ ಪ್ರಕಾರ ಈಗಾಗಲೇ ಲಷ್ಕರ್ ಉಗ್ರರನ್ನು ಈ ಕೆಲಸಕ್ಕಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಗುಪ್ತಚರ ಅಧಿಕಾರಿಗಳು ಈ ವಿಚಾರವನ್ನು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದು, ದೆಹಲಿಯ ಎಲ್ಲ ಶಾಲಾ-ಕಾಲೇಜುಗಳ ಬಳಿ  ಭದ್ರತೆ ಬಿಗಿಗೊಳಿಸಲಾಗಿದೆ. ಅಂತೆಯೇ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವಂತೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ನಿರ್ದೇಶನ ಕೂಡ ನೀಡಲಾಗಿದೆ.

ಆಫ್ಘಾನಿಸ್ತಾನದ ಮೂಲಕ ಆಗಮಿಸಲಿದ್ದಾರೆ ಉಗ್ರರು!
ಪಾಕಿಸ್ತಾನದ ಮೂಲಕ ಲಷ್ಕರ್ ಉಗ್ರ ಸಂಘಟನೆ ಮಾಸ್ಟರ್ ಪ್ಲಾನ್ ಹೇಗಿದೆ ಎಂದರೆ ಪಾಕಿಸ್ತಾನದಿಂದ ಅಥವಾ ಬಾಂಗ್ಲಾದೇಶದಿಂದ ಉಗ್ರರನ್ನು ರವಾನಿಸಿದರೆ ಸಿಕ್ಕಿ ಬೀಳುವ ಅಪಾಯ ಹೆಚ್ಚು. ಆದರೆ ಆಫ್ಘಾನಿಸ್ತಾನದಿಂದ ಅಕ್ರಮ ವಲಸಿಗರ ರೂಪದಲ್ಲಿ ಉಗ್ರರನ್ನು ಭಾರತಕ್ಕೆ ರವಾನಿಸಿದರೆ ಅವರು ಸಿಕ್ಕಿ ಬೀಳುವ ಅಪಾಯ ಕಡಿಮೆಯಂತೆ. ಈಗಾಗಲೇ ಇಂತಹ ಸಾಕಷ್ಟು ಪ್ರಕರಗಳಲ್ಲಿ ನಕಲಿ ದಾಖಲೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಅಕ್ರಮ ವಲಸಿಗರು ಬಂಧನಕ್ಕೀಡಾಗಿ ಬಳಿಕ ಬಿಡುಗಡೆಯಾಗಿ ಸ್ವತಂತ್ರವಾಗಿ ಭಾರತದಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಅಕ್ರಮ ವಲಸಿಗರ ರೂಪದಲ್ಲಿ ಉಗ್ರರರನ್ನು ರವಾನಿಸಿ ಬಳಿಕ ಅವರೇ ಪೊಲೀಸರಿಗೆ ಸಿಕ್ಕಿ ಬೀಳುವಂತೆ ಮಾಡಿ ಬಳಿಕ ಬಿಡುಗಡೆಯಾಗುವುದು ಲಷ್ಕರ್ ಸಂಘಟನೆಯ ಮಾಸ್ಟರ್ ಪ್ಲಾನ್ ಆಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com