ನಾಸ್ಟ್ರಾಡಮಸ್ ಭವಿಷ್ಯದಲ್ಲಿ ಹೇಳಲಾಗಿದ್ದ ನಾಯಕ ನರೇಂದ್ರ ಮೋದಿ: ಬಿಜೆಪಿ ಸಂಸದ

ನಾಸ್ಟ್ರಾಡಮಸ್ ಭಾರತವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ನಾಯಕನ ಬಗ್ಗೆ ಹೇಳಿದ್ದರು. ಅದು ಬೇರೆ ಯಾರು ಅಲ್ಲ ನರೇಂದ್ರ ಮೋದಿ ಅವರೇ ಎಂದು ಹೇಳಿದ್ದಾರೆ.
ನಾಸ್ಟ್ರಾಡಮಸ್-ನರೇಂದ್ರ ಮೋದಿ
ನಾಸ್ಟ್ರಾಡಮಸ್-ನರೇಂದ್ರ ಮೋದಿ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿರುವ ಬಿಜೆಪಿ ಸಂಸದ ಕೀರ್ತಿ ಸೋಮಯ್ಯ, ಫ್ರೆಂಚ್ ನ ಕಾಲಜ್ಞಾನಿ ನಾಸ್ಟ್ರಾಡಮಸ್ ಭಾರತವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ನಾಯಕನ ಬಗ್ಗೆ ಹೇಳಿದ್ದರು. ಅದು ಬೇರೆ ಯಾರು ಅಲ್ಲ ನರೇಂದ್ರ ಮೋದಿ ಅವರೇ ಎಂದು ಹೇಳಿದ್ದಾರೆ. 
ಪೂರ್ವ ದೇಶದಲ್ಲಿ ಒಬ್ಬ ನಾಯಕ ಉದಯಿಸುತ್ತಾನೆ, ಆತ ಭಾರತವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾನೆ ಎಂದು ನಾಸ್ಟ್ರಾಡಮಸ್ ಹೇಳಿದಿದ್ದು ನರೇಂದ್ರ ಮೋದಿ ಅವರ ಬಗ್ಗೆ ಎಂದು ಕೀರ್ತಿ ಸೋಮಯ್ಯ ಅಭಿಪ್ರಾಯಪಟ್ಟಿದ್ದಾರೆ. 
ಹಿಟ್ಲರ್ ನಂತಹ ನಾಯಕತ್ವ, 2001 ರಲ್ಲಿ ನಡೆದಿದ್ದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯಂತಹ ಪ್ರಮುಖ ಘಟನೆಗಳು ಸಂಭವಿಸುವ ಬಗ್ಗೆ ಫ್ರೆಂಚ್ ಕಾಲಜ್ಞಾನಿ ನಾಸ್ಟ್ರಾಡಮಸ್ 16 ನೇ ಶತಮಾನದಲ್ಲಿಯೇ ಭವಿಷ್ಯ ನುಡಿದ್ದ, ಇದೇ ಭವಿಷ್ಯವನ್ನು ಫೇಸ್ ಬುಕ್ ನಲ್ಲಿ ಹಿಂದೊಮ್ಮೆ ಹಂಚಿಕೆ ಮಾಡಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ನಾಸ್ಟ್ರಾಡಮಸ್ ಭವಿಷ್ಯ ನಿಜವಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com