ಭಾರತೀಯ ಮುಸ್ಲಿಮರು ರಾಮಮಂದಿರ ವಿರುದ್ಧವಿಲ್ಲ, ಆದರೆ, ಸುಪ್ರೀಂ ಅಂತಿಮ ಆದೇಶ ನೀಡಬೇಕು: ಮುಸ್ಲಿಂ ಮೌಲ್ವಿ

ಭಾರತೀಯ ಮುಸ್ಲಿಮರು ರಾಮಮಂದಿರ ವಿರುದ್ಧವಿಲ್ಲ. ಆದರೆ, ಸುಪ್ರೀಂ ಅಂತಿಮ ಆದೇಶ ನೀಡಬೇಕಿದೆ ಎಂದು ಮುಸ್ಲಿಂ ಮೌಲ್ವಿಯೊಬ್ಬರು ಮಂಗಳವಾರ ಹೇಳಿದ್ದಾರೆ...
ಲಖನೌ ಈದ್ಗಾ ಮಸೀದಿಯ ಮುಸ್ಲಿಂ ಮೌಲ್ವಿ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ
ಲಖನೌ ಈದ್ಗಾ ಮಸೀದಿಯ ಮುಸ್ಲಿಂ ಮೌಲ್ವಿ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ
ನವದೆಹಲಿ: ಭಾರತೀಯ ಮುಸ್ಲಿಮರು ರಾಮಮಂದಿರ ವಿರುದ್ಧವಿಲ್ಲ. ಆದರೆ, ಸುಪ್ರೀಂ ಅಂತಿಮ ಆದೇಶ ನೀಡಬೇಕಿದೆ ಎಂದು ಮುಸ್ಲಿಂ ಮೌಲ್ವಿಯೊಬ್ಬರು ಮಂಗಳವಾರ ಹೇಳಿದ್ದಾರೆ. 
ರಾಮ ಮಂದಿರ ವಿವಾದ ಸಂಬಂಧ ಇಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಅಯೋಧ್ಯೆಯ ರಾಮ ಜನ್ಮ ಭೂಮಿ ವಿವಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರವಾಗಿದ್ದು, ಸಂಧಾನದ ಮೂಲಕ ಮಾತ್ರ ವಿವಾದ ಇತ್ಯರ್ಥ ಸಾಧ್ಯ. ಹೀಗಾಗಿ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಹೇಳಿತ್ತು. 
ಸುಪ್ರೀಂ ಆದೇಶ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಲಖನೌ ಈದ್ಗಾ ಮಸೀದಿಯ ಮುಸ್ಲಿಂ ಮೌಲ್ವಿ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿಯವರು, ಸುಪ್ರೀಂಕೋರ್ಟ್ ಸಲಹೆಯನ್ನು ನಾವು ಗೌರವಿಸುತ್ತೇವೆ. ಈ ಬಗ್ಗೆ ನಾವು ಹಿರಿಯ ಮೌಲ್ವಿಗಳೊಂದಿಗೆ ಚರ್ಚಿಸಿ ನಾನು ಅಂತಿಮ ನಿರ್ಧಾರವನ್ನು ಹೇಳುತ್ತೇವೆಂದು ಹೇಳಿದ್ದಾರೆ. 
ಭಾರತೀಯ ಮುಸ್ಲಿಮರು ರಾಮ ಮಂದಿರ ನಿರ್ಮಾಣದ ವಿರುದ್ಧವಿಲ್ಲ. ಹಲವು ವರ್ಷಗಳಿಂದಲೂ ರಾಮ ಮಂದಿರ ವಿವಾದವಿದೆ. ಈ ವಿಚಾರ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ವಿಚಾರ ಸಂಬಂಧ ನಾವು ಸಂಧಾನ ಮಾಡಿಕೊಳ್ಳಬಹುದಿತ್ತು. ಆದರೆ, ರಾಜಕೀಯ ಪಕ್ಷಗಳು ಮಧ್ಯಪ್ರವೇಶ ಮಾಡುತ್ತಿರುವುದರಿಂದ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ನೀಡಬೇಕಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ಬದ್ಧವಾಗಿರುತ್ತದೆ ಎಂದು ನಾವು ನಂಬಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com