ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ರಾಮ ಹುಟ್ಟಿದ ಭೂಮಿಯಲ್ಲಿಯೇ ಮಂದಿರ ನಿರ್ಮಾಣ: ಸುಬ್ರಮಣಿಯನ್ ಸ್ವಾಮಿ

ರಾಮನ ಹುಟ್ಟಿದ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ, ಸರಯು ನದಿ ಬಳಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಅಯೋಧ್ಯೆ ವಿವಾದವನ್ನು ಇತ್ಯರ್ಥಪಡಿಸಿ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಮಂಗಳವಾರ...
ನವದೆಹಲಿ: ರಾಮನ ಹುಟ್ಟಿದ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ, ಸರಯು ನದಿ ಬಳಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಅಯೋಧ್ಯೆ ವಿವಾದವನ್ನು ಇತ್ಯರ್ಥಪಡಿಸಿ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 
ರಾಮ ಮಂದಿರ ನಿರ್ಮಾಣ ವಿವಾದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಂದಿರ ಹಾಗೂ ಮಸೀದಿ ನಿರ್ಮಾಣ ಮಾಡುವ ಕುರಿತಂತೆ ನಾವು ಸಿದ್ಧರಿದ್ದೇವೆ. ರಾಮ ಮಂದಿರವನ್ನು ರಾಮ ಹುಟ್ಟಿದ ಭೂಮಿಯಲ್ಲಿಯೇ ನಿರ್ಮಾಣ ಮಾಡಿ, ಸರಯು ನದಿ ಬಳಿ ಮಸೀದಿ ನಿರ್ಮಾಣ ಮಾಡುವ ಮೂಲಕ ವಿವಾದವನ್ನು ಇತ್ಯರ್ಥ ಮಾಡಬಹುದು ಎಂದು ಹೇಳಿದ್ದಾರೆ. 
ರಾಮ ಹುಟ್ಟಿದ ಭೂಮಿಯಲ್ಲಿಯೇ ರಾಮನ ದೇಗುಲವನ್ನು ನಿರ್ಮಾಣ ಮಾಡಬೇಕು. ರಾಮ ಹುಟ್ಟಿದ ಭೂಮಿಯನ್ನು ನಾವು ಬದಲು ಮಾಡಲು ಸಾಧ್ಯವಿಲ್ಲ. ಮಸೀದಿಯನ್ನು ನಾನು ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು. ರಾಮನ ಜನ್ಮ ಭೂಮಿಯನ್ನು ರಾಮ ಮಂದಿರದ ವಶಕ್ಕೆ ನೀಡಬೇಕು. ಮಸೀದಿಯನ್ನು ಸರಯು ನದಿ ಬಳಿ ನಿರ್ಮಾಣ ಮಾಡಬೇಕೆಂಬುದು ನನ್ನ ಸಲಹೆಯಾಗಿದೆ ಎಂದು ತಿಳಿಸಿದ್ದಾರೆ. 
ರಾಮ ಮಂದಿರ ವಿವಾದ ಸಂಬಂಧ ಇಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಅಯೋಧ್ಯೆಯ ರಾಮ ಜನ್ಮ ಭೂಮಿ ವಿವಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರವಾಗಿದ್ದು, ಸಂಧಾನದ ಮೂಲಕ ಮಾತ್ರ ವಿವಾದ ಇತ್ಯರ್ಥ ಸಾಧ್ಯ. ಹೀಗಾಗಿ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಹೇಳಿತ್ತು. 

Related Stories

No stories found.

Advertisement

X
Kannada Prabha
www.kannadaprabha.com