ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳು ಬಂದ್: ಚಿಕನ್ ತಿನ್ನಲು ಗರ್ಭಿಣಿ ಸಿಂಹಿಣಿ ನಿರಾಕರಣೆ

ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುತ್ತಿರುವುದರಿಂದ ಪ್ರಾಣಿ ಸಂಗ್ರಹಾಲಯದಲ್ಲಿ ಎಮ್ಮೆ ಮಾಂಸದ ಕೊರತೆ ಉಂಟಾಗಿದೆ.
ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳು ಬಂದ್: ಚಿಕನ್ ತಿನ್ನಲು ಗರ್ಭಿಣಿ ಸಿಂಹಿಣಿ ನಿರಾಕರಣೆ
ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳು ಬಂದ್: ಚಿಕನ್ ತಿನ್ನಲು ಗರ್ಭಿಣಿ ಸಿಂಹಿಣಿ ನಿರಾಕರಣೆ
ಲಖನೌ: ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುತ್ತಿರುವುದರಿಂದ ಪ್ರಾಣಿ ಸಂಗ್ರಹಾಲಯದಲ್ಲಿ ಎಮ್ಮೆ ಮಾಂಸದ ಕೊರತೆ ಉಂಟಾಗಿದೆ. 
ಅಚ್ಚರಿಯೆಂದರೆ ಎತ್ವಾಹ್ ಲಯನ್ ಸಫಾರಿಯಲ್ಲಿರುವ ಮೂರು ಜೋಡಿ ಸಿಂಹಗಳು ಹಾಗೂ ಎರಡು ಸಿಂಹದ ಮರಿಗಳು ದನದ ಮಾಂಸ ಸಿಗದೇ ಇದ್ದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಚಿಕನ್ ನ್ನು ತಿನ್ನಲು ನಿರಾಕರಿಸಿವೆ. ಪ್ರತಿ ದಿನ ಸಿಗುತ್ತಿದ್ದ ಎಮ್ಮೆ/ ದನದ ಮಾಂಸ ಸಿಗದೇ ಇದ್ದ ಹಿನ್ನೆಲೆಯಲ್ಲಿ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು ಸಿಂಹಗಳಿಗೆ ಚಿಕನ್ ಹಾಕಿದ್ದರು. ಸತತ ಮೂರು ದಿನಗಳಿಂದ ಇದೇ ರೀತಿ ನಡೆಯುತ್ತಿದ್ದು, ಸಿಂಹಗಳು ದನದ ಮಾಂಸ ಸೇವಿಸಿ ಮೂರು ದಿನಗಳಾಗಿವೆ ಎಂದು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು ತಿಳಿಸಿದ್ದಾರೆ. 
ಚಿಕನ್ ಕಡಿಮೆ ಕೊಬ್ಬು ಹೊಂದಿರುತ್ತದೆ. ಆದರೆ ಸಿಂಹಗಳಿಗೆ ಸರಿಯಾದ ಆಹಾರ ಸಿಗಬೇಕೆಂದರೆ ಅವುಗಳಿಗೆ ಎಮ್ಮೆ/ದನ ಅಥವಾ ಮಟನ್ ಆಹಾರ ನೀಡಬೇಕಾಗುತ್ತದೆ. ಪ್ರಾಣಿಸಂಗ್ರಹಾಲಯದಲ್ಲಿರುವ ಸಿಂಹಗಳ ಪೈಕಿ ಗರ್ಭಿಣಿ ಸಿಂಹವೂ ಇದ್ದು ಅದೂ ಸಹ ಚಿಕನ್ ತಿನ್ನಲು ನಿರಾಕರಿಸಿದೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. 
ಪ್ರಾಣಿ ಸಂಗ್ರಹಾಲಯದಲ್ಲಿ 47 ಮಾಂಸಾಹಾರಿ ಪ್ರಾಣಿಗಳಿದ್ದು ಅವುಗಳಿಗೆ ಆಹಾರ ಪೂರೈಕೆ ಮಾಡಲು 235 ಕೆಜಿಯಷ್ಟು ಮಾಂಸದ ಆಗತ್ಯವಿದ್ದು, ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುತ್ತಿರುವುದರಿಂದ ಪ್ರಾಣಿ ಸಂಗ್ರಹಾಲಯದಲ್ಲಿಯೂ ಮಾಂಸದ ಕೊರತೆ ಎದುರಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com