51 ವರ್ಷಗಳ ನಂತರ ಗಡಿ ಭದ್ರತಾ ಪಡೆಯಲ್ಲಿ ಮೊದಲ ಮಹಿಳಾ ಅಧಿಕಾರಿ

ಗಡಿ ಭದ್ರತಾ ಪಡೆಯ 51 ವರ್ಷಗಳ ಇತಿಹಾಸದಲ್ಲಿ ತನುಶ್ರೀ ಪರೀಕ್ ಮೊದಲ ಮಹಿಳಾ ಯುದ್ಧ...
ಇಂದು ಗ್ಲಾಲಿಯರ್ ನಲ್ಲಿ ನಡೆದ ಸಮಾರಂಭದಲ್ಲಿ ತನುಶ್ರೀ ಪರೀಕ್  ಅವರಿಗೆ ರ್ಯಾಂಕ್ ಸ್ಟಾರ್ ಬ್ಯಾಡ್ಜ್ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್
ಇಂದು ಗ್ಲಾಲಿಯರ್ ನಲ್ಲಿ ನಡೆದ ಸಮಾರಂಭದಲ್ಲಿ ತನುಶ್ರೀ ಪರೀಕ್ ಅವರಿಗೆ ರ್ಯಾಂಕ್ ಸ್ಟಾರ್ ಬ್ಯಾಡ್ಜ್ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್
ಗ್ವಾಲಿಯರ್: ಗಡಿ ಭದ್ರತಾ ಪಡೆಯ 51 ವರ್ಷಗಳ ಇತಿಹಾಸದಲ್ಲಿ ತನುಶ್ರೀ ಪರೀಕ್ ಮೊದಲ ಮಹಿಳಾ ಯುದ್ಧ ಅಧಿಕಾರಿಯಾಗಿ ಶನಿವಾರ ಸೇರ್ಪಡೆಗೊಂಡರು. ಮಧ್ಯ ಪ್ರದೇಶದ ಗ್ವಾಲಿಯರ್ ನ ಟೆಕನ್ಪುರ್ ಗಡಿ ಭದ್ರತಾ ಪಡೆ ಶಿಬಿರದಲ್ಲಿ ಇಂದು ನಡೆದ ಮೆರವಣಿಗೆಯ ಪರಾಮರ್ಶೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಡೆಸಿದರು. ಈ ಸಂದರ್ಭದಲ್ಲಿ 67 ಮಂದಿ ತರಬೇತಿ ಅಧಿಕಾರಿಗಳ ಮೆರವಣಿಗೆಯ ಮುಂದಾಳತ್ವವನ್ನು ತನುಶ್ರೀ ಪರೀಕ್ ವಹಿಸಿದ್ದರು.
ರಾಜಸ್ತಾನದ ಬಿಕನೇರ್ ನ ನಿವಾಸಿಯಾಗಿರುವ ಪರೀಕ್ ಅಧಿಕಾರಿ ಶ್ರೇಣಿಯಲ್ಲಿ ಗಡಿ ಭದ್ರತಾ ಪಡೆಯ ಮಹಿಳಾ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದು, 2014ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು.
ಇಂದು ನಡೆದ ಸಮಾರಂಭದಲ್ಲಿ ಸ್ವತಃ ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ಪರೀಕ್ ಅವರ ಹೆಗಲಿಗೆ ರ್ಯಾಂಕ್ ಸ್ಟಾರ್ ನ್ನು ಹಾಕಿದರು.
ಭಾರತ-ಪಾಕಿಸ್ತಾನ ಗಡಿಭಾಗದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲಿ ಪರೀಕ್ ಇನ್ನು ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com