"ಹೆಲೆನ್ ಆಫ್ ಟ್ರಾಯ್ ನೈಜ ಎನ್ನುವುದಾದರೆ ರಾಮ ಸೇತು ಯಾಕಾಗಬಾರದು"?

ರಾಮ ಸೇತು ಮಾನವ ನಿರ್ಮಿತವೋ ಅಥವಾ ಸ್ವಾಭಾವಿಕವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತಿಹಾಸ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಚ್‌ಆರ್) ಹೊಸ ಸಂಶೋಧನಾ ಯೋಜನೆಯನ್ನು ಕೈಗೊಳ್ಳುವುದಾಗಿ ಘೋಷಿಸಿದೆ.
ರಾಮ ಸೇತು
ರಾಮ ಸೇತು
ನವದೆಹಲಿ: ರಾಮ ಸೇತು ಮಾನವ ನಿರ್ಮಿತವೋ ಅಥವಾ ಸ್ವಾಭಾವಿಕವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತಿಹಾಸ ಸಂಶೋಧನೆಯ ಭಾರತೀಯ ಪರಿಷತ್ (ಐಸಿಎಚ್‌ಆರ್) ಹೊಸ ಸಂಶೋಧನಾ ಯೋಜನೆಯನ್ನು ಕೈಗೊಳ್ಳುವುದಾಗಿ ಘೋಷಿಸಿದೆ. 
ಅಕ್ಟೊಬರ್-ನವೆಂಬರ್ ತಿಂಗಳಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಈ ಬಗ್ಗೆ ಸ್ವತಃ ಐಸಿಹೆಚ್ಆರ್ ನ ಅಧ್ಯಕ್ಷ ವೈ ಸುದರ್ಶನ್ ರಾವ್ ಮಾಹಿತಿ ನೀಡಿದ್ದಾರೆ. ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಬರುವ ಐಸಿಹೆಚ್ಆರ್ ಸಂಸ್ಥೆ ರಾಮ ಸೇತು ಮಾನವ ನಿರ್ಮಿತವೋ ಅಥವಾ ನೈಸರ್ಗಿವಾದದ್ದೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಈ ಯೋಜನೆಯನ್ನು ನಡೆಸುತ್ತಿರುವುದಾಗಿ ಸುದರ್ಶನ್ ರಾವ್ ತಿಳಿಸಿದ್ದಾರೆ. 
ರಾಮೇಶ್ವರಂ ನಿಂದ ಶ್ರೀಲಂಕಾ ವರೆಗಿರುವ ರಾಮ ಸೇತುವಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಂಶೋಧನೆಗಳು ನಡೆದಿದ್ದು, ಹಲವು ಭೂರಚನಾ ಶಾಸ್ತ್ರದ ಸಿದ್ಧಾಂತಗಳು ಹಲವು ರೀತಿಯಲ್ಲಿ ರಾಮ ಸೇತು ನಿರ್ಮಾಣ, ರಚನೆಯನ್ನು ವಿಶ್ಲೇಷಿಸಿವೆ.  
ವಿವಿಧ ಸಂಸ್ಥೆಗಳ ಪುರಾತತ್ತ್ವ ಶಾಸ್ತ್ರ ವಿಭಾಗದಿಂದ ಸಂಶೋಧನಾ ವಿದ್ವಾಂಸರನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಸಮುದ್ರಕ್ಕೆ ಸಂಬಂಧಿಸಿದ ತರಬೇತಿ ಸಂಸ್ಥೆಗಳ ವಿಜ್ಞಾನಿಗಳ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದೆ. ಗ್ರೀಕ್  ಪುರಾಣದ "ಹೆಲೆನ್ ಆಫ್ ಟ್ರಾಯ್" ನೈಜವಾದದ್ದು ಎಂದು ಸಾಬೀತಾಗಿದೆ ಎನ್ನುವುದಾದರೆ ರಾಮ ಸೇತು ನೈಜವಾದದ್ದು ಏಕಾಗಬಾರದು ಎಂದು ಸುದರ್ಶನ್ ರಾವ್ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com