ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಜಯ ಪ್ರಕಾಶ್ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಅಕ್ರಮ ನಡೆಯುತ್ತಿರುವುದು ಪತ್ತೆಯಾಗಿದ್ದು, ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿದ್ದಾರೆ. ಥಾನಾ ಭವನ್, ಜಲಾಲಬಾದ್ ಶಾಮ್ಲಿಯಲ್ಲಿ ಪರವಾನಗಿ ಇಲ್ಲದೇ ನಡೆಸಲಾಗುತ್ತಿದ್ದ ಮಾಂಸದ ಅಂಗಡಿಗಳನ್ನೂ ಸಹ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಇನ್ನು ಮುಜಾಫರ್ ನಗರ ಜಿಲ್ಲೆಗಳಲ್ಲೂ ಹಲವು ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.