ಬಿಸಿಲಿಗೆ ಧಗಧಗ ಎನ್ನುತ್ತಿದೆ ಭೂಮಿ; ದೇಶದ ಹಲವು ಭಾಗಗಳಲ್ಲಿ ತಾಪಮಾನ ಏರಿಕೆ

ದೇಶದ ಹಲವು ಭಾಗಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದ್ದು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದ್ದು, ಆಂಧ್ರ ಪ್ರದೇಶ, ಗುಜರಾತ್, ಹರ್ಯಾಣ ಮತ್ತು ಪಂಜಾಬ್ ನಲ್ಲಿ ಬಿಸಿಲಿನ ಝಳ ತಾರಕಕ್ಕೇರಿದೆ.
ರಾಜಧಾನಿ ದೆಹಲಿಯಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಗರಿಷ್ಠ ಮಟ್ಟ 38.2  ಡಿಗ್ರಿ ದಾಖಲಾಗಿದೆ.
ಗುಜರಾತ್ ಮತ್ತು ಸೌರಾಷ್ಟ್ರ ಕಚ್ , ಅಮ್ರೇಲಿ ಪ್ರದೇಶದಲ್ಲಿ 42.9 ಡಿಗ್ರಿ ಸೆಲ್ಸಿಯಸ್, ಸುರೇಂದ್ರನಗರ ಮತ್ತು ಕಂಡ್ಲಾದಲ್ಲಿ 42  ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕಳೆದ ಸೋಮವಾರ ಅಹಮದಾಬಾದ್ ನಲ್ಲಿ ತಾಪಮಾನ ಗರಿಷ್ಠ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಕಳೆದ 7 ವರ್ಷಗಳಲ್ಲಿ ಮಾರ್ಚ್ ತಿಂಗಳಿನಲ್ಲಿ ನಗರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.
ವಿದರ್ಭ, ಅಲೋಕದಲ್ಲಿ 43.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆಂಧ್ರ ಪ್ರದೇಶದ ರಾಯಲ್ ಸೀಮಾ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರುತ್ತಾ ಹೋಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ, ಅನಂತಪುರಂ, ಕಡಪ, ಕರ್ನೂಲು ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ತಿರುಪತಿಯಲ್ಲಿ ಕೂಡ 40 ಡಿಗ್ರಿ ತಾಪಮಾನವಿದೆ. 
ಆಂಧ್ರ ಪ್ರದೇಶದ ಉತ್ತರ ಕರಾವಳಿಯ ಶ್ರೀಕಾಕುಲಂನಲ್ಲಿ 38 ಡಿಗ್ರಿ ಸೆಲ್ಸಿಯಸ್, ರಾಜಮಹೇಂದ್ರವರಂ ಮತ್ತು ಕಾಕಿನಾಡಗಳಲ್ಲಿ 37 ಡಿಗ್ರಿ ಮತ್ತು 35.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ನೆಲ್ಲೂರಿನಲ್ಲಿ 37 ಡಿಗ್ರಿ, ವಿಜಯವಾಡ, ಗುಂಟೂರು, ಅಮರಾವತಿಯಲ್ಲಿ ಕೂಡ 38 ಡಿಗ್ರಿ ಉಷ್ಣಾಂಶವಿದೆ. 
ಹರ್ಯಾಣ ರಾಜ್ಯದ ನರ್ನೌಲ್ ನಲ್ಲಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಪಂಜಾಬ್, ಪಟಿಯಾಲದಲ್ಲಿ ಗರಿಷ್ಣ 37 ಡಿಗ್ರಿ ಸೆಲ್ಸಿಯಸ್, ಲುಧಿಯಾನಾದಲ್ಲಿ 36.7, ಅಮೃತಸರದಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com