ಕಾನೂನು ಕಡ್ಡಾಯ ಆಗುವವರೆಗೂ 'ವಂದೇ ಮಾತರಂ' ಹೇಳುವಂತೆ ಒತ್ತಡ ಹೇರಬಾರದು: ಕಾಂಗ್ರೆಸ್

ಕಾನೂನು ಕಡ್ಡಾಯವಾಗುವವರೆಗೂ ವಂದೇ ಮಾತರಂ ಎಂದು ಘೋಷಣೆ ಕೂಗಲು ನಿರಾಕರಿಸಿದ ಜನರನ್ನು ತಪ್ಪಿತಸ್ಥರೆಂದು ದೂಷಿಸುವಂತಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ....
ಕಾಂಗ್ರೆಸ್ ಹಿರಿಯ ನಾಯಕ ಫರ್ನಾಂಡಿಸ್
ಕಾಂಗ್ರೆಸ್ ಹಿರಿಯ ನಾಯಕ ಫರ್ನಾಂಡಿಸ್
ನವದೆಹಲಿ: ಕಾನೂನು ಕಡ್ಡಾಯವಾಗುವವರೆಗೂ 'ವಂದೇ ಮಾತರಂ' ಎಂದು ಘೋಷಣೆ ಕೂಗಲು ನಿರಾಕರಿಸಿದ ಜನರನ್ನು ತಪ್ಪಿತಸ್ಥರೆಂದು ದೂಷಿಸುವಂತಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಫರ್ನಾಂಡಿಸ್ ಅವರು, ವಂದೇ ಮಾತಂ ಹಾಡು ಹೇಳುವ ಕುರಿತಂತೆ ಪ್ರಶ್ನೆಯಿಂದೆ. 'ವಂದೇ ಮಾತರಂ' ರಾಷ್ಟ್ರೀಯ ಗೀತೆ. ಯಾವುದೇ ವ್ಯಕ್ತಿ ಗೀತೆಯನ್ನು ಹಾಡಲಿಲ್ಲ ಎಂದ ಮಾತ್ರಕ್ಕೆ ಆತನನ್ನು ತಪ್ಪಿತಸ್ಥನೆಂದು ಹೇಳುವಂತಿಲ್ಲ. ಗೀತೆ ಹಾಡುವ ಕುರಿತಂತೆ ಕಾನೂನು ಜಾರಿಯಾಗುವವವರೆಗೂ ವಂದೇ ಮಾತರಂ ಹಾಡದವರನ್ನು ತಪ್ಪಿತಸ್ಥರೆಂದು ಹೇಳುವಂತಿಲ್ಲ ಎಂದು ಹೇಳಿದ್ದಾರೆ. 
ಇದರಂತೆಯೇ ಮತ್ತೊಂಬ್ಬ ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ ಅವರು ಕೂಡ ಹೇಳಿಕೆಯನ್ನು ನೀಡಿದ್ದು, ರಾಷ್ಟ್ರೀಯ ಗೀತೆ ಹಾಡುವಂತೆ ಜನರನ್ನು ಬಲವಂತ ಮಾಡುವುದು ನಿಜಕ್ಕೂ ಸರಿಯಲ್ಲ. ಯಾವುದೇ ಧರ್ಮದ ಬಗ್ಗೆ ನಾನು ವ್ಯಾಖ್ಯಾನ ನೀಡಲು ನಾನು ಇಚ್ಛಿಸುವುದಿಲ್ಲ. ಆಧರೆ, ಹಿಂದೂಸ್ತಾನ್ ಜಿಂದಾಬಾದ್ ಹಾಗೂ ವಂದೇ ಮಾತರಂ ನಡುವೆ ಯಾವುದೇ ಭಿನ್ನತೆಗಳಿಲ್ಲ ಎಂಬುದನ್ನು ನಾನು ನಂಬಿದ್ದೇನೆ. ಎರಡೂ ಗೀತೆಗಳೂ ರಾಷ್ಟ್ರಕ್ಕೆ ಸಂಬಂಧಿಸಿದ್ದು. ವ್ಯಕ್ತಿಯನ್ನು ವಂದೇ ಮಾತರಂ ಗೀತೆಯನ್ನೇ ಹಾಡಬೇಕೆಂದು ಒತ್ತಡ ಹೇರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ವಂದೇ ಮಾತರಂ ಹಾಡಲು ನಿರಾಕರಿಸಿದ ಮೀರತ್ ಪುರಸಭೆ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com