ಕಲ್ಲು ತೂರಾಟ, ಗಲಭೆ ಇನ್ನು ಕೂಡ ಮುಂದುವರಿದಿದ್ದು ರಾಜ್ಯದ ಜನತೆಯ ರಕ್ಷಣೆ ಆತಂಕಕ್ಕೀಡು ಮಾಡಿದೆ. ಶ್ರೀನಗರ ಮತ್ತು ಅನಂತ್ ನಾಗ್ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದಾಗಿನಿಂದ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣಾ ಆಯೋಗ ಈ ಮೊದಲು ಏಪ್ರಿಲ್ 12ರಂದು ಚುನಾವಣೆ ನಡೆಸುವುದಾಗಿ ನಿರ್ಧರಿಸಿತ್ತು. ಆದರೆ ಆಗ ನಡೆಸಲು ಸಾಧ್ಯವಾಗದೆ ಮೇ 25ಕ್ಕೆ ಮುಂದೂಡಿತ್ತು.