ಆಪ್ ಬಿಕ್ಕಟ್ಟು: ಅಮಾನತುಲ್ಲಾ ಖಾನ್ ಅಮಾನತು; ಕುಮಾರ್ ವಿಶ್ವಾಸ್ ಗೆ ರಾಜಸ್ಥಾನದ ಉಸ್ತುವಾರಿ

ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿದ್ದ ಆಮ್ ಆದ್ಮಿ ಪಕ್ಷದ ಶಾಸನ ಅಮಾನತುಲ್ಲಾ ಖಾನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಅಮಾನತುಲ್ಲಾ ಖಾನ್
ಅಮಾನತುಲ್ಲಾ ಖಾನ್
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡಿದ್ದ ಆಮ್ ಆದ್ಮಿ ಪಕ್ಷದ ಶಾಸನ ಅಮಾನತುಲ್ಲಾ ಖಾನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. 
ಆಪ್ ನ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ) ಸಭೆಯಲ್ಲಿ ಅಮಾನತುಲ್ಲಾ ಖಾನ್ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಕುಮಾರ್ ವಿಶ್ವಾಸ್ ಅವರನ್ನು ರಾಜಸ್ಥಾನದ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 
ಆಮ್ ಆದ್ಮಿ ಪಕ್ಷದ ಸಂಘಟನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಉದ್ದೇಶಿಸಿ ನಡೆಸಲಾದ ಪಿಎಸಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮಾನತುಲ್ಲಾ ಖಾನ್ ತಮ್ಮ ವಿರುದ್ಧ ಆರೋಪ ಮಾಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಕುಮಾರ್ ವಿಶ್ವಾಸ್ ಅವರನ್ನು ಮಂಗಳವಾರ(ಮೇ.2 ರಂದು) ರಾತ್ರಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿ ಮನವೊಲಿಸಿದ್ದರು. 
ಕುಮಾರ್ ವಿಶ್ವಾಸ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಜತೆ ಬಾಂಧವ್ಯ ಹೊಂದಿದ್ದು, ಪಕ್ಷದ ನಾಯಕರು ಇನ್ನೂ ಏಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ಕುಮಾರ್ ವಿಶ್ವಾಸ್ ಆಮ್ ಆದ್ಮಿ ಪಕ್ಷದ ಸಂಚಾಲಕರಾಗಲು ಬಯಸಿದ್ದಾರೆ. ಒಂದು ವೇಳೆ ಆ ಹುದ್ದೆ ಸಿಗದೇ ಇದ್ದಲ್ಲಿ ತಮ್ಮೊಂದಿಗೆ ಕೆಲವು ಆಪ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಇಬ್ಬರು ನಾಯಕರ ಆರೋಪ-ಪ್ರತ್ಯಾರೋಪಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ಉಂಟಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com