ನವದೆಹಲಿ: ಮುಂಬೈ ಮೂಲದ ಕಂಪೆನಿಯ ಪ್ರಚಾರಕ ಮತ್ತು ನಿರ್ದೇಶಕರನ್ನು ಜಾರಿ ನಿರ್ದೇಶನಾಲಯ 2,600 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಕೇಸಿಗೆ ಸಂಬಂಧಪಟ್ಟಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದೆ.
ದೇಶದಲ್ಲಿ ಬ್ಯಾಂಕ್ ಹಣ ವಂಚನೆಗೆ ಸಂಬಂಧಪಟ್ಟಂತೆ ತನಿಖಾ ಸಂಸ್ಥೆಗಳು ನಡೆಸಿದ ಅತಿ ದೊಡ್ಡ ಪ್ರಕರಣ ಎನ್ನಲಾಗಿದೆ. ತನಿಖಾಧಿಕಾರಿಗಳು ವಿಜಯ್ ಎಂ.ಚೌಧರಿ ಎಂಬುವವರನ್ನು ನಿನ್ನೆ ತಡರಾತ್ರಿ ಮುಂಬೈಯಲ್ಲಿ ಬಂಧಿಸಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ)ಯಡಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಸ್ ಝೂಮ್ ಡೆವೆಲಪರ್ಸ್ ಪ್ರೈ.ಲಿಮಿಟೆಡ್ ನ ಮುಖ್ಯ ನಿಯಂತ್ರಕ ಚೌಧರಿ ಅವರಾಗಿದ್ದು ಈ ಕೇಸಿನಲ್ಲಿ ಜಾರಿ ನಿರ್ದೇಶನಾಲಯಕ್ಕೆ ಬೇಕಾದವರಾಗಿದ್ದಾರೆ. ಕಂಪೆನಿ ಮತ್ತು ಅದರ ನಿಯಂತ್ರಕರು 25 ಬ್ಯಾಂಕುಗಳಿಂದ 2,650 ಕೋಟಿ ರೂಪಾಯಿ ವಂಚಿಸಿದ್ದಾರೆ.
ಚೌಧರಿಯವರನ್ನು ಇಂದು ಇಂದೋರ್ ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹಾಜರುಪಡಿಸುವ ನಿರೀಕ್ಷೆಯಿದೆ.
ಸಿಬಿಐ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿದೆ. ತನ್ನ ಅಥವಾ ತನ್ನ ಸಹವರ್ತಿಗಳ ಹೆಸರಿನಲ್ಲಿ ಚೌಧರಿ 485 ಕಂಪೆನಿಗಳನ್ನು ವಂಚಿಸಿದ್ದಾರೆ ಎಂದು ನಿರ್ದೇಶನಾಲಯ ಹೇಳಿದೆ. ಇದುವರೆಗೆ ಜಾರಿ ನಿರ್ದೇಶನಾಲಯ 130 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಸೇರಿಸಿದೆ. ಝೂಮ್ ಡೆವೆಲಪರ್ಸ್ ಇಂದೋರ್ ಮತ್ತು ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತದೆ.