ಮುಲಾಯಂ ಸಿಂಗ್ ಯಾದವ್ ಅಧ್ಯಕ್ಷತೆಯಲ್ಲಿ ಹೊಸ ಪಕ್ಷ ಸ್ಥಾಪನೆ; ಶಿವಪಾಲ್ ಯಾದವ್ ಹೇಳಿಕೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಶಿವಪಾಲ್ ಯಾದವ್ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಶಿವಪಾಲ್ ಯಾದವ್ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಹಿಂದೆ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಪಾಲ್ ಯಾದವ್ ಅವರು ಬಳಿಕ ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಅಲ್ಲದೆ ಸ್ವತಃ  ಸಿಎಂ ಅಖಿಲೇಶ್ ಯಾದವ್ ಅವರ ವಿರುದ್ಧ ಬಂಡಾಯವೆದಿದ್ದರು. ಇದೇ ಬಿಸಿಯಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆಂತರಿಕ ಬಂಡಾಯದಿಂದಾಗಿ ಕಾಂಗ್ರೆಸ್ ಮೈತ್ರಿ ಹೊರತಾಗಿಯೂ  ಹೀನಾಯವಾಗಿ ಸೋಲು ಕಂಡಿತ್ತು.

ಬಳಿಕ ಒಂದಷ್ಟು ದಿನಗಳ ಕಾಲ ಸುಮ್ಮನ್ನಿದ್ದ ನಾಯಕರು ಇದೀಗ ಮತ್ತೆ ರಾಜಕೀಯಕ್ಕಿಳಿದಿದ್ದು, ಪಕ್ಷದ ಮುಖಂಡ ಹಾಗೂ ಮುಲಾಯಂ ಸಿಂಗ್ ಸಹೋದರ ಶಿವಪಾಲ್ ಯಾದವ್ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ  ಘೋಷಣೆ ಮಾಡಿದ್ದಾರೆ. ಸಮಾಜವಾದಿ ಸೆಕ್ಯೂಲರ್ ಮೋರ್ಚಾ ಹೆಸರಿನಡಿಯಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಶಿವಪಾಲ್ ಯಾದವ್ ಹೇಳಿದ್ದು, ಅಲ್ಲದೆ ಈ ಹೊಸ ಪಕ್ಷಕ್ಕೆ ತಮ್ಮ ಹಿರಿಯ ಸಹೋದರ ಮುಲಾಯಂ ಸಿಂಗ್  ಯಾದವ್ ಅವರೇ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದ್ದಾರೆ.

ನೇತಾಜಿ ಮುಲಾಯಂ ಸಿಂಗ್ ಯಾದವ್ ಅವರ ಗೌರವವನ್ನು ಮರಳಿಸುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಸಮಾಜವಾದಿಗಳನ್ನು ಒಗ್ಗೂಡಿಸಲು ಸಮಾಜವಾದಿ ಸೆಕ್ಯೂಲರ್ ಮೋರ್ಚಾ ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com