ತ್ರಿಪುರ: ರೂ.200ಕ್ಕೆ ಮಗು ಮಾರಿದ ಮಹಾತಾಯಿ!

ರೂ.200ಕ್ಕೆ ಮಹಾತಾಯಿಯೊಬ್ಬಳು ತನ್ನ ಹೆತ್ತ ಕರುಳನ್ನೇ ಮಾರಿರುವ ಪ್ರಕರಣವೊಂದು ತ್ರಿಪುರಾದಲ್ಲಿ ಬೆಳಕಿಗೆ ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತ್ರಿಪುರ: ರೂ.200ಕ್ಕೆ ಮಹಾತಾಯಿಯೊಬ್ಬಳು ತನ್ನ ಹೆತ್ತ ಕರುಳನ್ನೇ ಮಾರಾಟ ಮಾಡಿರುವ ಪ್ರಕರಣವೊಂದು ತ್ರಿಪುರಾದಲ್ಲಿ ಬೆಳಕಿಗೆ ಬಂದಿದೆ. 
ಬಡತನ ರೇಖೆಗಿಂತೆ ಕೆಳಗಿನ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ತೀವ್ರ ಬಡತನ ಹಿನ್ನಲೆಯಲ್ಲಿ ತನ್ನ ಮಗುವನ್ನು ರೂ.200ಕ್ಕೆ ದನ್ ಶಾಯ್ ಎನ್ನುವ ಅಟೋ ಚಾಲಕನೊಬ್ಬನಿಗೆ ಮಾರಾಟ ಮಾಡಿದ್ದಾಳೆಂದು ತಿಳಿದುಬಂದಿದೆ. 
ಮಗುವನ್ನು ಮಾರಾಟ ಮಾಡದಂತೆ ತಿಳಿಸಿದ್ದೆ. ಆದರೂ ಮಾತು ಕೇಳದ ನನ್ನ ಪತ್ನಿ ಮಗುವನ್ನು ರೂ.200ಕ್ಕೆ ಮಾರಾಟ ಮಾಡಿದ್ದಾಳೆ. ಪ್ರಸ್ತುತ ಮಗು ಮಚ್ಕುಮ್ಭಿ ಗ್ರಾಮದಲ್ಲಿದ್ದು, 15-20 ದಿನಗಳ ಹಿಂದೆ ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಮಗುವಿನ ತಂದೆ ಖನಾಜೊಯ್ ರಿಯಾಂಗ್ ಹೇಳಿದ್ದಾರೆ. 
ಗ್ರಾಮಸ್ಥರ ಮುಂದೆ ಪ್ರಕರಣ ಬೆಳಕಿಗೆ ಬಂದಾಗ ಮಗುನ್ನು ಮತ್ತೆ ಹಿಂಪಡೆಯಲು ನಿರ್ಧರಿಸಿದ್ದೆವು. ಇದರಂತೆ ಮಗುವನ್ನು ಖರೀದಿ ಮಾಡಿದ ವ್ಯಕ್ತಿಯ ಬಳಿ ಹೋದಾಗ ಮಗುವನ್ನು ತಾಯಿ ಕೈಗೆ ಮಾತ್ರ ನೀಡುತ್ತೇವೆಂದು ತಿಳಿಸಿದ್ದರು ಎಂದು ರಿಯಾಂಗ್ ತಿಳಿಸಿದ್ದಾರೆ. 
ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಗುವನ್ನು ರಕ್ಷಣೆ ಮಾಡಲು ಯತ್ನ ಮಾಡುತ್ತಿದ್ದಾರೆ. 
ಪ್ರಕರಣ ಕುರಿತಂತೆ ಮಾತನಾಡಿರುವ ಸಿಡಿಪಿಒ ಅಬಿದ್ ಹುಸೇನ್ ಅವರು, ಪ್ರಕರಣ ತಮ್ಮ ಗಮನಕ್ಕೆ ಬಂದಿದ್ದು, ಮಗುವನ್ನು ತಾಯಿಗೆ ಒಪ್ಪಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com